ADVERTISEMENT

ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌: ಬೆಂಗಳೂರು ಚಾಂಪಿಯನ್‌; ದ.ಕ ರನ್ನರ್ ಅಪ್‌

ಧನುಷ್‌, ಡ್ಯಾಷೆಲ್‌ಗೆ ವೈಯಕ್ತಿಕ ಪ್ರಶಸ್ತಿ; ಶಾಮಿಲ್‌ಗೆ 4 ಚಿನ್ನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2023, 13:45 IST
Last Updated 12 ನವೆಂಬರ್ 2023, 13:45 IST
ಸಮಗ್ರ ಪ್ರಶಸ್ತಿ ಗೆದ್ದ ಬೆಂಗಳೂರು ತಂಡದವರ ಸಂಭ್ರಮ
ಸಮಗ್ರ ಪ್ರಶಸ್ತಿ ಗೆದ್ದ ಬೆಂಗಳೂರು ತಂಡದವರ ಸಂಭ್ರಮ   

ಮಂಗಳೂರು: ಮೊದಲ ದಿನದಿಂದಲೇ ಎಲ್ಲ ವಿಭಾಗಗಳಲ್ಲೂ ಪಾರಮ್ಯ ಮೆರೆದ ಬೆಂಗಳೂರು ಸ್ಕೇಟರ್‌ಗಳು ಇಲ್ಲಿ ಭಾನುವಾರ ಮುಕ್ತಾಯಗೊಂಡ ರಾಜ್ಯ ರೋಲರ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನ ಸಮಗ್ರ ಪ್ರಶಸ್ತಿಯನ್ನು ಗೆದ್ದುಕೊಂಡರು. ದಕ್ಷಿಣ ಕನ್ನಡ ಜಿಲ್ಲೆ ರನ್ನರ್ ಅಪ್‌ ಆಯಿತು. 

ರಾಜ್ಯ ರೋಲರ್ ಸ್ಕೇಟಿಂಗ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್‌ ಸಂಸ್ಥೆಗಳು ನಗರದ ಫ್ರಾನ್ಸಿಸ್ ಡೋರಿಸ್ ಸ್ಕೇಟ್ ಸಿಟಿ ಹಾಗೂ ಮುಂಚೂರಿನ ನಾರ್ದರ್ನ್‌ ಸ್ಕೈ ಲೇಔಟ್‌ನಲ್ಲಿ ಆಯೋಜಿಸಿದ್ದ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಒಟ್ಟು 657 ಪಾಯಿಂಟ್ಸ್ ಕಲೆ ಹಾಕಿದರೆ ದಕ್ಷಿಣ ಕನ್ನಡ 158 ಪಾಯಿಂಟ್ಸ್ ಗಳಿಸಿತು. 90 ಪಾಯಿಂಟ್‌ಗಳೊಂದಿಗೆ ಮೈಸೂರು ಮೂರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿತು. 

ಕ್ವಾಡ್‌ ವಿಭಾಗದ ಮಹಿಳೆಯರು, 14ರಿಂದ 17 ವರ್ಷದೊಳಗಿನ ಬಾಲಕಿಯರು ಮತ್ತು 9ರಿಂದ 11 ವರ್ಷದ ಬಾಲಕರ ವಿಭಾಗದಲ್ಲಿ ತಲಾ 15 ಚಿನ್ನ ಗೆದ್ದ ಬೆಂಗಳೂರು, ಇನ್‌ಲೈನ್‌ನ ಮಹಿಳೆಯರ ವಿಭಾಗದಲ್ಲಿ 20, 14ರಿಂದ 17 ವರ್ಷದ ಬಾಲಕಿಯರ ವಿಭಗದಲ್ಲಿ 18, ಬಾಲಕರ ವಿಭಾಗದಲ್ಲಿ 16 ಮತ್ತು ಇತರ 6 ವಿಭಾಗದಲ್ಲಿ 15 ಚಿನ್ನ ಗೆದ್ದುಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆ  ಇನ್‌ಲೈನ್‌ನ 14ರಿಂದ 17 ವರ್ಷದ ಬಾಲಕರ ವಿಭಾಗದಲ್ಲಿ 20 ಮತ್ತು ಪುರುಷರ ವಿಭಾಗದಲ್ಲಿ 16 ಚಿನ್ನ ತನ್ನದಾಗಿಸಿಕೊಂಡಿತು. ಪುರುಷರ ವಿಭಾಗದಲ್ಲಿ 20 ಪಾಯಿಂಟ್ಸ್ ಗಳಿಸಿದ ಬೆಂಗಳೂರಿನ ಧನುಷ್ ವೈಯಕ್ತಿಕ ಚಾಂಪಿಯನ್ ಆದರೆ, 3 ಚಿನ್ನ ಮತ್ತು 1 ಬೆಳ್ಳಿ ಗೆದ್ದ ದಕ್ಷಿಣ ಕನ್ನಡದ ಡಾಷೆಲ್ ಅಮಾಂಡ ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಎನಿಸಿಕೊಂಡರು. 4 ಚಿನ್ನ ಗೆದ್ದ ದಕ್ಷಿಣ ಕನ್ನಡದ ಮುಹಮ್ಮದ್ ಶಾಮಿಲ್ 14ರಿಂದ 17 ವರ್ಷದ ಬಾಲಕರ ವಿಭಾಗದ ಚಾಂಪಿಯನ್ ‍ಪಟ್ಟ ತಮ್ಮದಾಗಿಸಿಕೊಂಡರು.

ADVERTISEMENT

ಕೊನೆಯ ದಿನದ ಫಲಿತಾಂಶಗಳು: ಕ್ವಾಡ್‌: ರೋಡ್‌–1, ಲ್ಯಾಪ್‌1: ಪುರುಷರು: ದುಷ್ಯಂತ್‌ (ಬೆಂಗಳೂರು)–1, ಕಿರಣ್ ರೆಡ್ಡಿ (ಚಿಕ್ಕಬಳ್ಳಾಪುರ)–2, ರೇವತ್ ಜಿ.ವಿ (ಬೆಂಗಳೂರು)–3. ಕಾಲ: 44.97 ಸೆ; ಮಹಿಳೆಯರು: ಡಿಂಪಲ್ ಗೌಡ: (ಬೆಂಗಳೂರು)–1, ಹರ್ಷಿತಾ (ಬೆಂಗಳೂರು)–2, ವಿಶಾಖ ಫೂಲ್‌ವಾಲೆ (ಬೆಳಗಾವಿ)–3. ಕಾಲ: 50.93 ಸೆ; 14ರಿಂದ 17 ವರ್ಷದ ಬಾಲಕರು: ವಿಜಯ್ ಜಿ (ಮೈಸೂರು)–1, ಮೌರ್ಯ ರೆಡ್ಡಿ (ಬೆಂಗಳೂರು)–2, ವಿ.ಶ್ರೇಯಸ್ ಗೌಡ (ಬೆಂಗಳೂರು)–3. ಕಾಲ:45.1 ಸೆ; ಬಾಲಕಿಯರು: ನಿಹಾರಿಕಾ (ಬೆಂಗಳೂರು)–1, ಸಮಾಖ್ಯ ಅಡಿಗ (ಬೆಂಗಳೂರು)–2, ಶುಭ್ರ ಜ್ಯೋತ್ಸ್ನಾ ಅಡ್ಡೂರು (ದಕ್ಷಿಣ ಕನ್ನಡ)–3. ಕಾಲ: 51.1 ಸೆ; 11ರಿಂದ 14 ವರ್ಷದ ಬಾಲಕರು: ಋಥವ್ ಪ್ರದೀಪ್‌ (ಬೆಂಗಳೂರು)–1, ಸೌರಭ್ ಸಲೋಖೆ (ಬೆಳಗಾವಿ)–2, ಶಾಲೋಮ್ ಕ್ರಿಸ್ಟನ್‌ (ದಕ್ಷಿಣ ಕನ್ನಡ)–3. ಕಾಲ: 48.31 ಸೆ; ಬಾಲಕಿಯರು: ಜೆಸ್ನಿಯಾ ಕೊರಿಯಾ (ದಕ್ಷಿಣ ಕನ್ನಡ)–1, ಪಾವನಿ ಶೆಟ್ಟಿ (ಮೈಸೂರು)–2, ಧಾತ್ರಿ ಎಂ (ಬೆಂಗಳೂರು)–3. ಕಾಲ: 49.5 ಸೆ; 9ರಿಂದ 11 ವರ್ಷದ ಬಾಲಕರು: ಲಿಖಿತ್ ಶರ್ಮಾ (ಬೆಂಗಳೂರು)–1, ಅರ್ಜುನ್ ಕುಮಾರ್ (ಬೆಂಗಳೂರು)–2, ಕುಲದೀಪ್‌ ಬಿರ್ಜೆ (ಬೆಳಗಾವಿ)–3. ಕಾಲ: 50.81 ಸೆ; ಬಾಲಕಿಯರು: ಡಿಂಪಾನ (ಬೆಂಗಳೂರು)–1, ಅದಿತಿ ಪಾಲ್‌ (ಬೆಂಗಳೂರು)–2, ನಿಳಾ ಸಂಪತ್‌ (ಶಿವಮೊಗ್ಗ)–3. ಕಾಲ: 54.94 ಸೆ; 7ರಿಂದ 9 ವರ್ಷದ ಬಾಲಕರು: ಅವಧೂತ್ ಮೋರೆ (ಬೆಳಗಾವಿ)–1, ರೋಹನ್ ಎಸ್‌.ಆರ್‌ (ತುಮಕೂರು)–2, ಶಿವಂ ವೈ.ಎನ್‌ (ದಕ್ಷಿಣ ಕನ್ನಡ)–3. ಕಾಲ: 54.67 ಸೆ; ಬಾಲಕಿಯರು: ಕೀರ್ತಿ (ದಕ್ಷಿಣ ಕನ್ನಡ)–1, ನಿಶ್ಚಿತಾ ದರ್ಶನ್‌ (ಬೆಂಗಳೂರು)–2, ಧ್ರುವ ಪಾಟೀಲ (ಬೆಳಗಾವಿ)–3. ಕಾಲ: 58.69 ಸೆ.

ರನ್ನರ್ ಅಪ್ ಸ್ಥಾನ ಗಳಿಸಿದ ದಕ್ಷಿಣ ಕನ್ನಡ ಸ್ಕೇಟರ್‌ಗಳ ಸಂಭ್ರಮ
ಮಹಿಳಾ ವಿಭಾಗದಲ್ಲಿ ವೈಯಕ್ತಿಕ ಚಾಂಪಿಯನ್ ಆದ ಡಾಷೆಲ್ ಅಮಾಂಡ
ಬಾಲಕರ ವಿಭಾಗದಲ್ಲಿ 4 ಚಿನ್ನ ಗೆದ್ದ ದಕ್ಷಿಣ ಕನ್ನಡದ ಮೊಹಮ್ಮದ್ ಶಾಮಿಲ್ ಅರ್ಷದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.