ಹೈದರಾಬಾದ್: ಮಣಿಂದರ್ ಸಿಂಗ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಸಾಂಘಿಕ ಹೋರಾಟ ಪ್ರದರ್ಶಿಸಿದ ಬೆಂಗಾಲ್ ವಾರಿಯರ್ಸ್ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡವನ್ನು ಭಾನುವಾರ ಎರಡು ಅಂಕಗಳಿಂದ ಸೋಲಿಸಿತು.
ಇದರೊಂದಿಗೆ ಸತತ ಎರಡು ಟೈಗಳ ಬಳಿಕ ಬೆಂಗಾಲ್ ಗೆಲುವಿನ ಲಹರಿಗೆ ಮರಳಿತು. ಗಚ್ಚಿಬೌಲಿ ಒಳಾಗಂಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ತಂಡ 40-38 ಅಂಕಗಳಿಂದ ಜಯಗಳಿಸಿತು. ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಕೊನೆಯ ಕ್ಷ ಣದ ಒತ್ತಡವನ್ನು ನಿಭಾಯಿಸಲು ಎಡವಿದ ಹರಿಯಾಣ ಹ್ಯಾಟ್ರಿಕ್ ಗೆಲುವಿನ ನಂತರ ಸೋಲಿಗೆ ಶರಣಾಯಿತು.
ಬೆಂಗಾಲ್ ವಾರಿಯರ್ಸ್ ಗೆಲುವಿನಲ್ಲಿ ಮಣಿಂದರ್ ಸಿಂಗ್ (12 ಅಂಕ) ಮಹತ್ವದ ಪಾತ್ರವಹಿಸಿದರೆ, ಸುಶೀಲ್, ನಿತಿನ್, ಪ್ರವೀಣ್ ಮತ್ತು ನಾಯಕ ಫಜ್ಹಲ್ ಅತ್ರಾಚಲಿ ಅಲ್ಪ ಕಾಣಿಕೆ
ನೀಡಿದರು. ಹರಿಯಾಣ ಸ್ಟೀಲರ್ಸ್ ಪರ ಆಲ್‌ರೌಂಡರ್ ಮೊಹಮ್ಮದ್‌ರೇಝಾ (9 ಅಂಕ), ನವೀನ್ (7ಅಂಕ) ಮತ್ತು ವಿನಯ್ (10 ಅಂಕ) ಮಿಂಚಿದರು.
ದಿನದ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪುಣೇರಿ ಪಲ್ಟನ್ ತಂಡ 35–28 ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಮಣಿಸಿತು.
ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್ ತಂಡ 38–35ರಲ್ಲಿ ಮೂರು ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್ ತಂಡವನ್ನು ಸೋಲಿಸಿತು. ಇದು ಬುಲ್ಸ್ ತಂಡಕ್ಕೆ ಆರು ಪಂದ್ಯಗಳಲ್ಲಿ ಎದುರಾದ ಐದನೇ ಸೋಲು.
ಸೋಮವಾರದ ಪಂದ್ಯಗಳು: ಪುಣೇರಿ ಪಲ್ಟನ್– ಗುಜರಾತ್ ಜೈಂಟ್ಸ್ (ರಾತ್ರಿ 8.00) ಬೆಂಗಳೂರು ಬುಲ್ಸ್– ತಮಿಳ್ ತಲೈವಾಸ್ (ರಾತ್ರಿ 9.00)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.