ADVERTISEMENT

26ರಂದು ‘ಬೆಂಗಳೂರು ಚಳಿಗಾಲದ ಡರ್ಬಿ’

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 15:56 IST
Last Updated 24 ಜನವರಿ 2024, 15:56 IST
ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಅಧ್ಯಕ್ಷ ಮತ್ತು ಸೀನಿಯರ್‌ ಸ್ಟೀವರ್ಡ್‌ ಅರವಿಂದ್ ರಾಘವನ್‌ ಅವರು ಟ್ರೋಫಿಗಳನ್ನು ಅನಾವರಣ ಮಾಡಿದರು.
ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಅಧ್ಯಕ್ಷ ಮತ್ತು ಸೀನಿಯರ್‌ ಸ್ಟೀವರ್ಡ್‌ ಅರವಿಂದ್ ರಾಘವನ್‌ ಅವರು ಟ್ರೋಫಿಗಳನ್ನು ಅನಾವರಣ ಮಾಡಿದರು.   

ಬೆಂಗಳೂರು: ಇಲ್ಲಿನ ರೇಸ್‌ಕೋರ್ಸ್ ಅಂಗಳದಲ್ಲಿ ಪ್ರತಿಷ್ಠಿತ ‘ದಿ ವಿನ್‌ಫೇರ್‌247 ಬೆಂಗಳೂರು ಡರ್ಬಿ’ ಶುಕ್ರವಾರ (ಜ.26) ನಡೆಯಲಿದ್ದು, 10 ಕುದುರೆಗಳು ಪೈಪೋಟಿ ನಡೆಸಲಿವೆ.

‘51ನೇ ಆವೃತ್ತಿಯ ಚಳಿಗಾಲದ ಡರ್ಬಿಯು ಒಟ್ಟು ₹1.70 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿರಲಿದೆ. ವಿಜೇತ ಕುದುರೆಯು ತನ್ನ ಮಾಲೀಕನಿಗೆ ₹ 83.72 ಲಕ್ಷ ದೊರಕಿಸಿಕೊಡಲಿದೆ’ ಎಂದು ಬೆಂಗಳೂರು ಟರ್ಫ್‌ ಕ್ಲಬ್‌ (ಬಿಟಿಸಿ) ಅಧ್ಯಕ್ಷ ಮತ್ತು ಸೀನಿಯರ್‌ ಸ್ಟೀವರ್ಡ್‌ ಅರವಿಂದ್ ರಾಘವನ್‌ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿನ್‌ಫೇರ್‌247 ಪ್ರಾಯೋಜಕತ್ವ: ಆನ್‌ಲೈನ್‌ ಗೇಮಿಂಗ್ ಆ್ಯಪ್‌ ಮತ್ತು ಈ ಗೇಮಿಂಗ್‌ ಬ್ರಾಂಡ್‌ ‘ವಿನ್‌ಫೇರ್‌ 247’ ಈ ರೇಸ್‌ನ ಪ್ರಾಯೋಜಕತ್ವ ಪಡೆದಿದೆ. ಶುಕ್ರವಾರ ಚಳಿಗಾಲದ ಡರ್ಬಿಯ ‘ಟೈಟಲ್‌ ಪ್ರಾಯೋಜಕತ್ವ’ವನ್ನೂ ವಿನ್‌ಫೇರ್‌
ತನ್ನದಾಗಿಸಿಕೊಂಡಿದೆ ಎಂದು ಅರವಿಂದ್‌ ತಿಳಿಸಿದರು.

ADVERTISEMENT

ಇದೇ ವೇಳೆ ಟ್ರೋಫಿಗಳನ್ನು ಅನಾವರಣ ಮಾಡಲಾಯಿತು. ಬಳಿಕ ಡರ್ಬಿ ಕುದುರೆಗಳ ‘ಡ್ರಾ’ ಸಂಖ್ಯೆ ನಿಗದಿಪಡಿಸಲಾಯಿತು.

ಡರ್ಬಿಯಲ್ಲಿ ಪಾಲ್ಗೊಳ್ಳುವ ಕುದುರೆಗಳು ಹಾಗೂ ಡ್ರಾ ಸಂಖ್ಯೆ: 1.ಪ್ರಾಣ (4), 2. ರೂಲಿಂಗ್‌ ಡೈನಾಸ್ಟಿ (9), 3.ಸಾಯ್ಗಾನ್‌ (7), 4.ಆಗಸ್ಟ್‌ (3), 5.ಫಾಸ್ಟ್‌ ಪೇಸ್‌ (1), 6.ಜಮಾರಿ (6), 7.ಮೇಡಮ್‌ ರಿಚ್‌ (10), 8.ಸ್ನೋಪಿಯರ್ಸರ್‌ (5), 9.ಸಂಥಿಂಗ್‌ ರಾಯಲ್‌ (2), 10. ಟೆಹಾನಿ (8).

‘ದಿ ವಿನ್‌ಫೇರ್‌247 ಬೆಂಗಳೂರು ಡರ್ಬಿ’ಯ ಟ್ರೋಫಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.