ಬೆಂಗಳೂರು: ಉದ್ಯಾನನಗರಿಯಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಕ್ರೀಡೆಗಳಿಗೆ ಪರಂಪರೆ ಇದೆ. ಈಗ ಮತ್ತೊಂದು ಮಹತ್ವದ ಟೂರ್ನಿಯೊಂದಕ್ಕೆ ನಗರವು ಆತಿಥ್ಯ ವಹಿಸುತ್ತಿದೆ.
ಶನಿವಾರ ಇಲ್ಲಿ ಐಬಿಎಸ್‌ಎಫ್ ವಿಶ್ವ ಜೂನಿಯರ್ ಸ್ನೂಕರ್ (17 ವರ್ಷ ಮತ್ತು 21 ವರ್ಷದೊಳಗಿನವರು) ಪುರುಷ ಮತ್ತು ಮಹಿಳಾ ವಿಭಾಗದ ಟೂರ್ನಿ ಆರಂಭವಾಗಲಿದೆ. ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆ(ಕೆಎಸ್‌ಬಿಎ)ಯಲ್ಲಿ 31ರವರೆಗೆ ಟೂರ್ನಿಯು ನಡೆಯಲಿದೆ.
11 ದೇಶಗಳ ಆಟಗಾರರು ಈ ಟೂರ್ನಿಯಲ್ಲಿ ಸ್ಪರ್ಧಿಸಲಿದ್ದಾರೆ. ಪಾಕಿಸ್ತಾನದ ಆಟಗಾರರು ಮತ್ತು ತೈವಾನ್‌ನ ಒಬ್ಬ ಆಟಗಾರನಿಗೆ ವೀಸಾ ಸಿಗದ ಕಾರಣ ಸ್ಪರ್ಧಿಸಲು ಸಾಧ್ಯವಾಗಿಲ್ಲ.
ಆದರೆ ಈ ಟೂರ್ನಿಯು ಆತಿಥೇಯ ದೇಶದ ಉದಯೋನ್ಮುಖ ಆಟಗಾರರಿಗೆ ಉತ್ತಮ ಅವಕಾಶವಾಗಿದೆ.
ಈ ಟೂರ್ನಿಯಲ್ಲಿ ಫೈನಲ್ ತಲುಪುವ ಆಟಗಾರರು ಇದೇ ನವೆಂಬರ್‌ನಲ್ಲಿ ಕತಾರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅರ್ಹತೆ ಪಡೆಯಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.