ADVERTISEMENT

ಜೀವಶಾಸ್ತ್ರ ಒಲಿಂಪಿಯಾಡ್‌: ಭಾರತಕ್ಕೆ ಚಿನ್ನ, ಬೆಳ್ಳಿ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 13:54 IST
Last Updated 14 ಜುಲೈ 2024, 13:54 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮುಂಬೈ: ಕಜಕಿಸ್ತಾನದ ರಾಜಧಾನಿ ಆಸ್ತಾನದಲ್ಲಿ ನಡೆದ 35ನೇ ಅಂತರಾಷ್ಟ್ರೀಯ ಜೀವಶಾಸ್ತ್ರ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಒಂದು ಚಿನ್ನ ಮತ್ತು 2 ಬೆಳ್ಳಿ ಪದಕಗಳು ಲಭಿಸಿವೆ.

ಮುಂಬೈನ ವೇದಾಂತ್‌ ಸಕ್ತೆ ಅವರು ಚಿನ್ನದ ಪದಕ ಪಡೆದಿದ್ದು, ರತ್ನಗಿರಿಯ ಇಶಾನ್‌ ಪೆಡ್ನೆಕರ್, ಚೆನ್ನೈನ ಶ್ರೀಜಿತ್‌ ಶಿವಕುಮಾರ್‌ ಮತ್ತು ಬರೇಲಿಯ ಯಶಸ್ವಿಕುಮಾರ್‌ ಅವರು ರಜತ ಪದಕ ಗಳಿಸಿದ್ದಾರೆ.

ADVERTISEMENT

ಜುಲೈ 7ರಿಂದ 13ರವರೆಗೆ ನಡೆದ ಒಲಿಂಪಿಯಾಡ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ದೊರಕಿರುವ ಬಗ್ಗೆ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆಯಡಿ ಕಾರ್ಯನಿರ್ವಹಿಸುವ ಹೋಮಿ ಭಾಭಾ ವಿಜ್ಞಾನ ಅಧ್ಯಯನ ಕೇಂದ್ರ (ಎಚ್‌ಬಿಸಿಎಸ್‌ಇ) ಮಾಹಿತಿ ನೀಡಿದೆ.

ಐಬಿಒ 2024ರಲ್ಲಿ ಜೀವಶಾಸ್ತ್ರಕ್ಕೆ ಸಂಬಂಧಿಸಿದ 1:05 ಗಂಟೆಗಳ ಪ್ರಾಯೋಗಿಕ ಪರೀಕ್ಷೆ ಮತ್ತು ಸಂಶೋಧನಾ ಪ್ರಬಂಧಗಳ ಆಧರಿತ ಮೂರೂಕಾಲು ಗಂಟೆಗಳ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.