ADVERTISEMENT

ಪ್ಯಾರಿಸ್ ಒಲಿಂ‍ಪಿಕ್ಸ್‌ನ ವಿಜೇತ ಕುಸ್ತಿಪಟು ಇಮಾನ್ ಖಲೀಫ್ ಹೆಣ್ಣಲ್ಲ... ಗಂಡು?

ಏಜೆನ್ಸೀಸ್
Published 5 ನವೆಂಬರ್ 2024, 10:04 IST
Last Updated 5 ನವೆಂಬರ್ 2024, 10:04 IST
<div class="paragraphs"><p>2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಲ್ಜೇರಿಯನ್ ಕುಸ್ತಿಪಟು ಇಮಾನ್ ಖಲೀಫ್‌</p></div>

2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಲ್ಜೇರಿಯನ್ ಕುಸ್ತಿಪಟು ಇಮಾನ್ ಖಲೀಫ್‌

   

ರಾಯಿಟರ್ಸ್‌ ಚಿತ್ರ

ನವದೆಹಲಿ: 2024ರ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳಾ ವಿಭಾಗದ ಕುಸ್ತಿಯಲ್ಲಿ ಚಿನ್ನ ಗೆದ್ದ ಅಲ್ಜೇರಿಯನ್ ಕುಸ್ತಿಪಟು ಇಮಾನ್ ಖಲೀಫ್‌ ಅವರು ಹೆಣ್ಣಲ್ಲ, ಗಂಡು ಎನ್ನುವುದು ವೈದ್ಯಕೀಯ ವರದಿಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. 

ADVERTISEMENT

ಇಮಾನ್‌ ಅವರು ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ 66 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಸ್ಪರ್ಧಿಸಿದ್ದರು, ಒಲಿಂಪಿಕ್ಸ್‌ ಮುಗಿದು ತಿಂಗಳುಗಳೇ ಕಳೆದಿವೆ. ಇದೀಗ ಇಮಾನ್‌ ಅವರು ಹೆಣ್ಣಲ್ಲ.. ಜೈವಿಕವಾಗಿ ಅವರು ಪುರುಷ ಎನ್ನುವ ವಿಚಾರ ಹೊರಬಿದ್ದಿದ್ದು ವಿವಾದಕ್ಕೆ ಕಾರಣವಾಗಿದೆ.

ಈ ವಿಚಾರವಾಗಿ ಭಾರತದ ಮಾಜಿ ಕ್ರಿಕೆಟ್‌ ಆಟಗಾರ ಹರ್ಭಜನ್‌ ಸಿಂಗ್‌ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್‌ ಹಂಚಿಕೊಂಡಿರುವ ಹರ್ಭಜನ್‌ ಸಿಂಗ್‌, ಒಲಿಂಪಿಕ್ಸ್‌ ಅನ್ನು ಟ್ಯಾಗ್‌ ಮಾಡಿ, ‘ಇಮಾನ್‌ ಅವರು ಗೆದ್ದಿರುವ ಚಿನ್ನದ ಪದಕವನ್ನು ವಾಪಸ್‌ ಪಡೆಯಿರಿ’ ಎಂದಿದ್ದಾರೆ. 

ಸೋರಿಕೆಯಾಗಿರುವ ಇಮಾನ್‌ ಲಿಂಗತ್ವ ಕುರಿತು ವೈದ್ಯಕೀಯ ವರದಿಯನ್ನು ಫ್ರೆಂಚ್‌ ಪತ್ರಕರ್ತ Djaffar Ait Aoudia ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವರದಿಯಲ್ಲಿ ಇಮಾನ್‌ ಅವರು XY ಕ್ರೋಮೋಸೋಮ್‌ಗಳನ್ನು ಹೊಂದಿದ್ದಾರೆ. ಇದು 5–ಆಲ್ಫಾ ಕಿಣ್ವದ ಅಸ್ವಸ್ಥತೆಯಿಂದ ಸಂಭವಿಸುತ್ತದೆ ಎನ್ನುವ ಮಾಹಿತಿಯಿದೆ ಎಂದು ವರದಿಯಾಗಿದೆ.

2023ರಲ್ಲೇ ಪ್ಯಾರಿಸ್‌ನ ಕ್ರೆಮ್ಲಿನ್‌ ಆಸ್ಪತ್ರೆ ಮತ್ತು ಅಲ್ಜಿರ್ಸ್‌ನಲ್ಲಿನ ಆಸ್ಪತ್ರೆಯ ತಜ್ಞ ವೈದ್ಯರು ಈ ವರದಿಯನ್ನು ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ. ಇಮಾನ್‌ ಅವರ ದೇಹದಲ್ಲಿ ವೃಷಣಗಳು ಇರುವುದು ಹಾಗೂ ಗರ್ಭಕೋಶ ಇಲ್ಲದಿರುವುದೂ ಪತ್ತೆಯಾಗಿದೆ. ಇದರ ಜತೆಗೆ ಅವರ ದೇಹದಲ್ಲಿನ ಜೈವಿಕ ಗುಣಲಕ್ಷಣಗಳ ಬಗ್ಗೆ ವರದಿಯಲ್ಲಿ ವಿಸ್ತ್ರತವಾಗಿ ವಿವರಿಸಲಾಗಿದೆ ಎಂದು ವರದಿ ತಿಳಿಸಿದೆ.

2023ರಲ್ಲಿ ದೆಹಲಿಯಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗಿಯಾಗದಂತೆ ಅಂತರರಾಷ್ಟ್ರೀಯ ಕುಸ್ತಿ ಅಸೋಸಿಯೇಷನ್‌ ಇಮಾನ್‌ ಅವರಿಗೆ ನಿಷೇಧ ಹೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.