ADVERTISEMENT

Paris Olympics | 46 ಸೆಕೆಂಡುಗಳಲ್ಲಿ ‘ಗೆದ್ದ’ ಇಮಾನೆ

ಬಾಕ್ಸಿಂಗ್‌ ವೆಲ್ಟರ್‌ವೇಟ್‌ 16ರ ಸುತ್ತು

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 0:24 IST
Last Updated 2 ಆಗಸ್ಟ್ 2024, 0:24 IST
<div class="paragraphs"><p>ಏಂಜೆಲಾ ಕ್ಯಾರಿನಿ, ಇಮಾನೆ ಖೆಲಿಫ್</p></div>

ಏಂಜೆಲಾ ಕ್ಯಾರಿನಿ, ಇಮಾನೆ ಖೆಲಿಫ್

   

ಪ್ಯಾರಿಸ್‌: ಅಲ್ಜೀರಿಯಾದ ಇಮಾನೆ ಖೆಲಿಫ್ ವಿರುದ್ಧದ ಹೋರಾಟದಲ್ಲಿ ಸಾಕಷ್ಟು ಏಟುಗಳನ್ನು ತಿಂದ ಇಟಲಿಯ ಬಾಕ್ಸರ್‌ ಏಂಜೆಲಾ ಕ್ಯಾರಿನಿ ಅವರು ವೆಲ್ಟರ್‌ವೇಟ್ 16ರ ಸುತ್ತಿನ ಸ್ಪರ್ಧೆಯಿಂದ ಹಿಂದೆ ಸರಿದರು. ಕೇವಲ 46 ಸೆಕೆಂಡುಗಳಲ್ಲಿ ಇತ್ಯರ್ಥವಾದ ಈ ಸ್ಪರ್ಧೆ ವಿವಾದಕ್ಕೆ ಕಾರಣವಾಯಿತು.

ಮೊದಲ 30 ಸೆಕೆಂಡುಗಳಲ್ಲಿ ಸತತ ಶಕ್ತಿಶಾಲಿ ಪಂಚ್‌ಗಳಿಗೆ ಇಟಲಿಯ ಸ್ಪರ್ಧಿ ಗುರಿಯಾದರು. ನಂತರ  ಮೂಗಿನ ಎಡಭಾಗಕ್ಕೆ ಇನ್ನೊಂದು ಬಲವಾದ ಪ್ರಹಾರ ಬಿದ್ದಾಗ ಸ್ಪರ್ಧೆಯಿಂದ ಹಿಂದೆಸರಿದರು. ತಮ್ಮ ಕೈಎತ್ತಿ ರಿಂಗ್‌ನ ಮೂಲೆಯಲ್ಲಿ ಮಂಡಿಯೂರಿ ಕುಳಿತರು.

ADVERTISEMENT

ಇಮಾನೆ ಅವರಿಗೆ ಕಳೆದ ವರ್ಷ ವಿಶ್ವ ಚಾಂಪಿಯನ್‌ಷಿಪ್‌ ವೇಳೆ ನಡೆಸಿದ್ದ ಲಿಂಗತ್ವ ಅರ್ಹತಾ ಪರೀಕ್ಷೆಯಲ್ಲಿ ಹಿನ್ನಡೆ ಆಗಿತ್ತು. ಅವರ ಸ್ಪರ್ಧೆಗೆ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಒಪ್ಪಿಗೆ ನೀಡಿತ್ತು. ಇದರ ಬಗ್ಗೆ ಬಾಕ್ಸಿಂಗ್‌ ವಲಯದಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

‘ತಮ್ಮ ಸ್ಪರ್ಧಿ ಹಿಂದೆಸರಿದಿರುವುದಾಗಿ’ ಏಂಜೆಲಾ ಅವರ ಕೋಚ್‌ ಹೇಳಿದರು. ಏಂಜೆಲಾ ಕುಳಿತಲ್ಲೇ ಕಣ್ಣೀರುಹಾಕಿದರು. ಎದುರಾಳಿಗೆ ಹಸ್ತಲಾಘವ ನೀಡಲು ನಿರಾಕರಿಸಿದರು. ರೆಫ್ರಿ ಅವರು ಅಲ್ಜೀರಿಯಾ ಸ್ಪರ್ಧಿಯನ್ನು ವಿಜೇತೆ ಎಂದು ಘೋಷಿಸಿದರು.

‘ನಾನು ಹೋರಾಟಗಾರ್ತಿ. ನನ್ನ ತಂದೆ ನನಗೆ ಹೋರಾಟ ಮಾಡುವುದನ್ನು ಕಲಿಸಿದರು. ನಾನು ಅದೇ ಮನೋಭಾವದಲ್ಲಿ ಕಣಕ್ಕಿಳಿದೆ. ಇಂದು ನಾನು ಸೋತಿಲ್ಲ. ಪ್ರಬುದ್ಧಳಾಗಿ ವರ್ತಿಸಿ ಶರಣಾದೆ’ ಎಂದು ಹೇಳಿದರು.

ಕೆಲಿಫ್ ಮತ್ತು ತೈವಾನ್‌ನ ಎರಡು ಬಾರಿಯ ವಿಶ್ವ ಚಾಂಪಿಯನ್‌ ಲಿನ್‌ ಯು–ಟಿಂಗ್‌ ಅವರಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು. ಐಒಸಿ, ಅಂತರರಾಷ್ಟ್ರೀಯ ಬಾಕ್ಸಿಂಗ್‌ ಸಂಸ್ಥೆಯನ್ನು (ಐಬಿಎ) ಮಾನ್ಯ ಮಾಡಿಲ್ಲ.

ಮೇಲಿನ ಇಬ್ಬರನ್ನು 2023ರ ವಿಶ್ವ ಚಾಂಪಿಯನ್‌ಷಿಪ್‌ ವೇಳೆ ಐಬಿಎ ಅನರ್ಹಗೊಳಿಸಿತ್ತು. ಪುರುಷ xy ಕ್ರೊಮೊಸೋಮ್‌ಗಳಿರುವ ಸ್ಪರ್ಧಿಗಳು ಮಹಿಳಾ ವಿಭಾಗದಲ್ಲಿ ಸ್ಪರ್ಧಿಸುವುದನ್ನು ಅರ್ಹತಾ ನಿಯಮ ತಡೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.