ADVERTISEMENT

ಟಿ20: ಮೈಸೂರು ವಿವಿಗೆ ಪ್ರಶಸ್ತಿ

ಕೇರಂ: ಬಹುಮಾನ ಮೊತ್ತ ದಾನ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2024, 16:15 IST
Last Updated 17 ಫೆಬ್ರುವರಿ 2024, 16:15 IST
<div class="paragraphs"><p>ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು </p></div>

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮೈಸೂರು

   

ಬೆಂಗಳೂರು: ನಗರದ ಬಾಗಲೂರಿನಲ್ಲಿರುವ ಸಿಎಂಆರ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಟಿ20 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೈಸೂರು ವಿಶ್ವವಿದ್ಯಾಲಯವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ಸಿಎಂಆರ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರು ದಿನ ನಡೆದ ಪಂದ್ಯಾವಳಿಯ ಫೈನಲ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯವು,  ಪಿಇಎಸ್ ವಿಶ್ವವಿದ್ಯಾಲಯದ ವಿರುದ್ಧ 57 ರನ್‌ಗಳಿಂದ ಗೆಲುವು ಸಾಧಿಸಿತು. ಟೂರ್ನಿಯಲ್ಲಿ 16 ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು.

ADVERTISEMENT

ಕೇರಂ: ಬಹುಮಾನ ಮೊತ್ತ ದಾನ

ಮುಂಬೈ: ಮುಂಬೈನಲ್ಲಿ ಮುಕ್ತಾಯಗೊಂಡ ಮಹಾರಾಷ್ಟ್ರ ಓಪನ್ ಕೇರಂ ಚಾಲೆಂಜರ್ಸ್ ಕಪ್‌ ಟೂರ್ನಿಯ ಫೈನಲ್‌ನಲ್ಲಿ ವಿದರ್ಭದ ಇರ್ಷಾದ್ ಅಹಮ್ಮದ್‌ ಅವರು ಕರ್ನಾಟಕ ಜಹೀರ್‌ ಪಾಷ ಅವರನ್ನು ಟೈ ಬ್ರೇಕರ್‌ನಲ್ಲಿ ಸೋಲಿಸಿದರು. 

ತಮಗೆ ದೊರೆತ ಬಹುಮಾನದ ₹ 1 ಲಕ್ಷ ಮೊತ್ತವನ್ನು ಜಹೀರ್ ಅವರು ವೃತ್ತಿಯಲ್ಲಿ ಆಟೊ ರಿಕ್ಷಾ ಚಾಲಕರಾಗಿರುವ, ಆರ್ಥಿಕ ತೊಂದರೆಯಲ್ಲಿರುವ ಇರ್ಷಾದ್ ಅವರಿಗೆ ನೀಡಿದರು. ಈ ಟೂರ್ನಿಯಲ್ಲಿ 503 ಕೇರಂ ಪಟುಗಳು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.