ADVERTISEMENT

ಬ್ಯಾಡ್ಮಿಂಟನ್: ಒಲಿಂಪಿಕ್ಸ್ ಅರ್ಹತಾ ಟೂರ್ನಿಗಳು ರದ್ದು

ಪಿಟಿಐ
Published 20 ಮಾರ್ಚ್ 2020, 19:01 IST
Last Updated 20 ಮಾರ್ಚ್ 2020, 19:01 IST
ಪ್ರಾತನಿಧಿಕ ಚಿತ್ರ
ಪ್ರಾತನಿಧಿಕ ಚಿತ್ರ   

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿ ಮಹತ್ವದ್ದಾಗಿದ್ದ ಮೂರು ಟೂರ್ನಿಗಳು ಒಳಗೊಂಡಂತೆ ಒಟ್ಟು ಐದು ಟೂರ್ನಿಗಳನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಷನ್ (ಬಿಡಬ್ಲ್ಯುಎಫ್‌) ಶುಕ್ರವಾರ ರದ್ದುಗೊಳಿಸಿದೆ. ಟೂರ್ನಿಗಳು ಆಯೋಜನೆಯಾಗಿದ್ದ ನಗರಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟ ಕಾರಣ ಈ ಕ್ರಮಕ್ಕೆ ಫೆಡರೇಷನ್ ಮುಂದಾಗಿದೆ.

ಏಪ್ರಿಲ್ 16ರಿಂದ 19ರ ವರೆಗೆ ನಿಗದಿಯಾಗಿದ್ದ ಕ್ರೊವೇಷ್ಯನ್ ಇಂಟರ್‌ನ್ಯಾಷನಲ್, ಇದೇ ಅವಧಿಯಲ್ಲಿ ನಡೆಯಬೇಕಾಗಿದ್ದ ಪೆರು ಇಂಟರ್‌ನ್ಯಾಷನಲ್, ಏಪ್ರಿಲ್ 21ರಿಂದ 26ರ ವರೆಗೆ ನಡೆಯಬೇಕಾಗಿದ್ದ ಯುರೋಪಿಯನ್ ಚಾಂಪಿಯನ್‌ಷಿಪ್, ಇದೇ ಅವಧಿಯಲ್ಲಿ ನಿಗದಿಯಾಗಿದ್ದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಷಿಪ್ ಮತ್ತು ಏಪ್ರಿಲ್ 23ರಿಂದ 26ರ ವರೆಗೆ ನಡೆಯಬೇಕಾಗಿದ್ದ ಪ್ಯಾನ್ ಅಮೆರಿಕನ್ ಇಂಡಿವಿಜುವಲ್ ಚಾಂಪಿಯನ್‌ಷಿಪ್‌ಗಳನ್ನು ಕೈಬಿಡಲಾಗಿದೆ.

‘ಒಲಿಂಪಿಕ್ಸ್ ಅರ್ಹತೆಗೆ ಸಂಬಂಧಿಸಿ ಕೈಗೊಳ್ಳುವ ನಿರ್ಧಾರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಆಟಗಾರರ ಆರೋಗ್ಯ, ಭದ್ರತೆ ಒಳಗೊಂಡಂತೆ ಒಟ್ಟಾರೆ ಕ್ಷೇಮ ಸದ್ಯದ ಆದ್ಯತೆ’ ಎಂದುಬಿಡಬ್ಲ್ಯುಎಫ್‌ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.