ಟೋಕಿಯೊ: ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಭಾರತದ ಲಕ್ಷ್ಯ ಸೇನ್, ಗೆಲುವಿನೊಂದಿಗೆ ಶುಭಾರಂಭ ಮಾಡಿಕೊಂಡಿದ್ದಾರೆ.
ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಹೋರಾಟದಲ್ಲಿ ಲಕ್ಷ್ಯ ಸೇನ್, ಡೆನ್ಮಾರ್ಕ್‌ನ ಹಾನ್ಸ್ ಕ್ರಿಸ್ಟಿಯನ್ ಸೋಲ್‌ಬರ್ಗ್ ವಿಟಿಂಗಸ್ ವಿರುದ್ಧ 21-12, 21-11ರ ಅಂತರದಲ್ಲಿ ಸುಲಭ ಗೆಲುವು ದಾಖಲಿಸಿ ಮುನ್ನಡೆದರು.
ಇದನ್ನೂ ಓದಿ:ಲಕ್ಷ್ಯ, ಪ್ರಣಯ್ ಮೇಲೆ ಭರವಸೆ
ಇತ್ತೀಚೆಗಷ್ಟೇ ಅಂತ್ಯಗೊಂಡ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಲಕ್ಷ್ಯ ಸೇನ್, ಚಿನ್ನದ ಪದಕ ಜಯಿಸಿದ್ದರು. 2021ರಲ್ಲಿ ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಸಾಧನೆ ಮಾಡಿದ್ದರು.
ಪ್ರಣೀತ್ ನಿರ್ಗಮನ...
ಈ ನಡುವೆ ಭಾರತದ ಪದಕದ ನಿರೀಕ್ಷೆಯಾಗಿದ್ದ ಬಿ. ಸಾಯ್ ಪ್ರಣೀತ್, ಪುರುಷ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದು, ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.
ಚೈನೀಸ್ ತೈಪೆಯ ಚೌ ಟಿನ್ ಚೆನ್ ವಿರುದ್ಧ ಪ್ರಣೀತ್, 15-21, 21-15, 15-21ರ ಅಂತರದಲ್ಲಿ ಮುಗ್ಗರಿಸಿದರು.
2019ರಲ್ಲಿ ಸಾಯ್ ಪ್ರಣೀತ್, ಕಂಚಿನ ಪದಕ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.