ಟೋಕಿಯೊ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಕಂಚಿನ ಪದಕ ಗೆದ್ದಿದ್ದಾರೆ.
ಏಳನೇ ಶ್ರೇಯಾಂಕಿತ ಚಿರಾಗ್–ಸಾತ್ವಿಕ್ ಜೋಡಿ ಸೆಮಿಫೈನಲ್ ಹಣಾಹಣಿಯಲ್ಲಿ ಮಲೇಷ್ಯಾದ ಆ್ಯರನ್ ಚಿಯಾ ಹಾಗೂ ಸೊಹ್ ವೂಯಿ ಯಿಕ್ ಜೋಡಿ ವಿರುದ್ಧ 20-22, 21-18, 21-16ರ ಅಂತರದಲ್ಲಿ ಸೋಲು ಅನುಭವಿಸಿದರು.
ಇದನ್ನೂ ಓದಿ:ಡೈಮಂಡ್ ಲೀಗ್: ನೀರಜ್ಗೆ ಅಗ್ರಸ್ಥಾನ
ಮೊದಲ ಸೆಟ್ ಗೆದ್ದರೂ ಅಂತಿಮ ಎರಡು ಸೆಟ್ ಕಳೆದುಕೊಂಡ ಚಿರಾಗ್–ಸಾತ್ವಿಕ್ ಜೋಡಿ 77 ನಿಮಿಷಗಳ ಹೋರಾಟದಲ್ಲಿ ಪರಾಭವಗೊಂಡಿತು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ಡಬಲ್ಸ್ ವಿಭಾಗದಲ್ಲಿ ಭಾರತಕ್ಕೆ ದೊರಕಿದ ಎರಡನೇ ಪದಕ ಇದಾಗಿದೆ. 2011ರಲ್ಲಿ ಕನ್ನಡತಿ ಅಶ್ವಿನಿ ಪೊನ್ನಪ್ಪ ಹಾಗೂ ಜ್ವಾಲಾ ಗುಟ್ಟಾ ಮಹಿಳಾ ಡಬಲ್ಸ್‌ನಲ್ಲಿ ಕಂಚು ಗೆದ್ದಿದ್ದರು.
ಹಾಗೆಯೇ ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್‌ಷಿಪ್ ಪುರುಷರ ಡಬಲ್ಸ್ ವಿಭಾಗದಲ್ಲಿ ಪದಕ ಗೆದ್ದ ಭಾರತದ ಮೊದಲ ಜೋಡಿ ಎಂಬ ಹೆಗ್ಗೆಳಿಕೆಗೆ ಪಾತ್ರರಾಗಿದ್ದಾರೆ.
ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ತಕುರೊ ಹೊಕಿ–ಯುಗೊ ಕೊಬಾಯಶಿ ಮಣಿಸಿದ್ದ ಭಾರತೀಯ ಜೋಡಿ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡಿದ್ದರು. ಆದರೆ ತಮ್ಮ ಸಾಧನೆ ಉತ್ತಮಪಡಿಸಿಕೊಳ್ಳುವ ಅವಕಾಶದಿಂದ ವಂಚಿತರಾಗಿದ್ದಾರೆ.
ಬಿಡಬ್ಲ್ಯುಎಫ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯರ ಸಾಧನೆ:
ಪ್ರಕಾಶ್ ಪಡುಕೋಣೆ - ಕಂಚು (1983 )
ಅಶ್ವಿನಿ ಪೊನ್ನಪ್ಪ-ಜ್ವಾಲಾ ಗುಟ್ಟಾ - ಕಂಚು (2011)
ಪಿ.ವಿ. ಸಿಂಧು: (ಚಿನ್ನ - 2019), (ಬೆಳ್ಳಿ - 2017-2018), (ಕಂಚು - 2013-2014)
ಸೈನಾ ನೆಹ್ವಾಲ್: (ಬೆಳ್ಳಿ - 2015), (ಕಂಚು - 2017)
ಸಾಯಿ ಪ್ರಣೀತ್: ಕಂಚು (2019)
ಕಿಂದಬಿ ಶ್ರೀಕಾಂತ್: ಬೆಳ್ಳಿ (2021)
ಲಕ್ಷ್ಯ ಸೇನ್: ಕಂಚು (2021)
ಸಾತ್ವಿಕ್/ಚಿರಾಗ್: ಕಂಚು (2022)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.