ADVERTISEMENT

ಬ್ಯಾಡ್ಮಿಂಟನ್‌ ತರಬೇತಿ ಅಂಗಣಕ್ಕಿಳಿಯಲಿರುವ ಚಾಂಗ್

ಏಜೆನ್ಸೀಸ್
Published 6 ಡಿಸೆಂಬರ್ 2018, 17:37 IST
Last Updated 6 ಡಿಸೆಂಬರ್ 2018, 17:37 IST
ಚಾಂಗ್ ವೀ
ಚಾಂಗ್ ವೀ   

ಕೌಲಾಲಂಪುರ: ಮೂಗಿನ ಕ್ಯಾನ್ಸರ್‌ನಿಂದ ಗುಣಮುಖರಾಗಿರುವ ಮಲೇಷ್ಯಾದ ಲೀ ಚಾಂಗ್ ವೀ, ಇನ್ನೆರಡು ವಾರಗಳಲ್ಲಿ ಬ್ಯಾಡ್ಮಿಂಟನ್‌ ತರಬೇತಿ ಅಂಗಣಕ್ಕೆ ಮರಳಲಿದ್ದಾರೆ.

ಒಲಿಂಪಿಕ್‌ನಲ್ಲಿಮೂರು ಬಾರಿ ಬೆಳ್ಳಿ ಪದಕ ಗೆದ್ದಿರುವ ಚಾಂಗ್ ವೀ, ಮೂಗಿನ ಕ್ಯಾನ್ಸರ್‌ನಿಂದಾಗಿ ಐದು ತಿಂಗಳಿಂದ ಬ್ಯಾಡ್ಮಿಂಟನ್‌ನಿಂದ ಹಿಂದೆ ಸರಿದಿದ್ದರು. ಅವರ ಆರೋಗ್ಯದ ಕುರಿತು ಯಾವುದೇ ಸಮಸ್ಯೆ ಇಲ್ಲ ಎಂದುವೈದ್ಯರು ವರದಿ ನೀಡಿದ್ದು, ಆಟಕ್ಕೆ ಮರಳಲು ತಯಾರಿ ಆರಂಭಿಸಿದ್ದಾರೆ ಎಂದು ಮಲೇಷ್ಯಾದ ಬ್ಯಾಡ್ಮಿಂಟನ್‌ ಮುಖ್ಯಸ್ಥರು ವಿವರಿಸಿದ್ದಾರೆ.

‘ಒಲಿಂಪಿಕ್‌ ಅರ್ಹತಾಸುತ್ತುಮೇ 1ರಿಂದ ಆರಂಭವಾಗಲಿದ್ದು, ಅಷ್ಟರಲ್ಲಿ ಚಾಂಗ್ ವೀ ಗುಣಮುಖರಾಗಿರುತ್ತಾರೆ’ ಎಂದು ನೋರ್ಜಾ ಜಕಾರಿಯಾ ತಿಳಿಸಿದ್ದಾರೆ.

ADVERTISEMENT

ಪ್ರಸ್ತುತ ವಿಶ್ವ ಬ್ಯಾಡ್ಮಿಂಟನ್‌ ಸಂಸ್ಥೆಯ ರ‍್ಯಾಂಕಿಂಗ್‌ನಲ್ಲಿ 15ನೇ ಸ್ಥಾನಕ್ಕಿಳಿದಿರುವ ಚಾಂಗ್ ವೀ, ಜುಲೈನಲ್ಲಿ ನಡೆದಿದ್ದ ಇಂಡೋನೇಷ್ಯಾ ಓಪನ್‌ನಲ್ಲಿ ಕೊನೆಯದಾಗಿ ಆಡಿದ್ದರು.

ಸ್ಪರ್ಧಾತ್ಮಕ ಪುನರಾಗಮನದ ನೀರೀಕ್ಷೆಯಲ್ಲಿರುವ ಚಾಂಗ್ ,ಮಾರ್ಚ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್‌ ಓಪನ್‌ನಲ್ಲಿ ಸ್ಪರ್ಧಿಸಲಿದ್ದಾರೆ. 2020 ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಗುರಿ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.