ADVERTISEMENT

ಟಾಟಾ ಸ್ಟೀಲ್ ಚೆಸ್‌ಗೆ ಕಾರ್ಲ್‌ಸನ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 16:03 IST
Last Updated 21 ಅಕ್ಟೋಬರ್ 2024, 16:03 IST
ಕಾರ್ಲ್‌ಸನ್‌
ಎಪಿ/ಪಿಟಿಐ ಚಿತ್ರ
ಕಾರ್ಲ್‌ಸನ್‌ ಎಪಿ/ಪಿಟಿಐ ಚಿತ್ರ   

ಕೋಲ್ಕತ್ತ: ವಿಶ್ವದ ಅಗ್ರಮಾನ್ಯ ಆಟಗಾರ, ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ನವೆಂಬರ್‌ 13 ರಿಂದ 17ರವರೆಗೆ ನಡೆಯಲಿರುವ ಆರನೇ ಆವೃತ್ತಿಯ ಟಾಟಾ ಸ್ಟೀಲ್‌ ಚೆಸ್‌ ಇಂಡಿಯಾ ಟೂರ್ನಿಯಲ್ಲಿ ಆಡಲಿದ್ದುಮ, ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಎರಡನೇ ಬಾರಿ ನಾರ್ವೆಯ ಮಾಜಿ ವಿಶ್ವಚಾಂಪಿಯನ್ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಹಿಂದೆ 2019ರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಚಾಂಪಿಯನ್ ಆಗಿದ್ದರು.

ಒಲಿಂಪಿಯಾಡ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದ್ದ ತಂಡದ ಬಹುತೇಕ ಆಟಗಾರರು (ಅರ್ಜುನ್ ಇರಿಗೇಶಿ, ಪ್ರಜ್ಞಾನಂದ, ವಿದಿತ್‌ ಗುಜರಾತಿ) ಅವರೂ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. ಓಪನ್ ವಿಭಾಗದಲ್ಲಿ ಇವರ ಜೊತೆ ನಿಹಾಲ್ ಸರಿನ್ ಮ್ತು ಎಸ್‌.ಎಲ್‌.ನಾರಾಯಣನ್ ಅವರೂ ಕಣದಲ್ಲಿ ಇದ್ದಾರೆ.

ADVERTISEMENT

ಈ ಬಾರಿಯೂ ಓಪನ್ ಮತ್ತು ಮಹಿಳಾ ವಿಭಾಗದಲ್ಲಿ ಸ್ಪರ್ಧೆಯಿರಲಿದೆ. ಬಹುಮಾನ ಹಣವೂ ಸಮಾನವಾಗಿದೆ. ರ್‍ಯಾಪಿಡ್ ಮತ್ತು ಬ್ಲಿಟ್ಜ್ ಮಾದರಿಯ ಸುತ್ತುಗಳಿವೆ.

ಭಾರತದ ಚೆಸ್‌ ದಿಗ್ಗಜ ವಿಶ್ವನಾಥನ್ ಆನಂದ್ ಅವರು ಟೂರ್ನಿಯ ರಾಯಭಾರಿಯಾಗಿ ಮುಂದುವರಿಯಲಿದ್ದಾರೆ.

ಪಾಲ್ಗೊಳ್ಳುವವರು:

ಓಪನ್ ವಿಭಾಗ: ಮ್ಯಾಗ್ನಸ್‌ ಕಾರ್ಲ್‌ಸನ್‌, ನಾಡಿರ್ಬೆಕ್ ಅಬ್ದುಸತ್ತಾರೊವ್‌, ವೆಸ್ಲಿ ಸೊ, ವಿನ್ಸೆಂಟ್ ಕೀಮರ್‌, ಡೇನಿಯಲ್ ಡುಬೊವ್, ಅರ್ಜುನ್ ಇರಿಗೇಶಿ, ಆರ್‌.ಪ್ರಜ್ಞಾನಂದ, ವಿದಿತ್‌ ಗುಜರಾತಿ, ನಿಹಾಲ್ ಸರಿನ್, ಎಸ್‌.ಎಲ್‌.ನಾರಾಯಣನ್‌.

ಮಹಿಳೆಯರು: ಅಲೆಕ್ಸಾಂಡ್ರಾ ಗೊರ್ಯಾಚ್ಕಿನಾ, ಕ್ಯಾತರಿನಾ ಲಾಗ್ನೊ, ಅಲೆಕ್ಸಾಂಡ್ರಾ ಕೊಸ್ಟೆನಿಯುಕ್‌, ನಾನಾ ಝಾಗ್ನಿಡ್ಜ್‌, ವೆಲೆಂಟಿನಾ ಗುನಿನಾ, ಕೋನೇರು ಹಂಪಿ, ಆರ್‌.ವೈಶಾಲಿ, ಡಿ.ಹಾರಿಕಾ, ದಿವ್ಯಾ ದೇಶಮುಖ್ ಮತ್ತು ವಂತಿಕಾ ಅಗರವಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.