ADVERTISEMENT

ಸೂಪರ್‌ ಬೆಟ್‌ ಚೆಸ್‌: ಕರುವಾನಾಗೆ ಪ್ರಶಸ್ತಿ

ಟೈಬ್ರೇಕರ್‌ನಲ್ಲಿ ಪ್ರಜ್ಞಾನಂದ, ಗುಕೇಶ್‌ಗೆ ಸೋಲು

ಪಿಟಿಐ
Published 6 ಜುಲೈ 2024, 21:48 IST
Last Updated 6 ಜುಲೈ 2024, 21:48 IST
ಫ್ಯಾಬಿಯಾನೊ ಕರುವಾನಾ
ಫ್ಯಾಬಿಯಾನೊ ಕರುವಾನಾ   

ಬುಖಾರೆಸ್ಟ್‌ (ರೊಮೇನಿಯಾ): ಅಗ್ರ ಶ್ರೇಯಾಂಕದ ಅಮೆರಿಕದ ಫ್ಯಾಬಿಯಾನೊ ಕರುವಾನಾ ಅವರು ಭಾರತದ ಗ್ರ್ಯಾಂಡ್ ಮಾಸ್ಟರ್‌ಗಳಾದ ಡಿ. ಗುಕೇಶ್ ಮತ್ತು ಆರ್. ಪ್ರಜ್ಞಾನಂದ ಅವರನ್ನೊಳಗೊಂಡ ಚತುಷ್ಪಥ ಟೈಬ್ರೇಕರ್‌ನಲ್ಲಿ ಎಲ್ಲಾ ಮೂರು ರ್‍ಯಾಪಿಡ್‌ ಗೇಮ್‌ಗಳನ್ನು ಗೆಲ್ಲುವ ಮೂಲಕ ಸೂಪರ್‌ಬೆಟ್ ಕ್ಲಾಸಿಕ್ ಚೆಸ್‌ ಟೂರ್ನಿಯ ಪ್ರಶಸ್ತಿಯನ್ನು ಉಳಿಸಿಕೊಂಡರು.

ಕರುವಾನಾ ಅವರು ಕ್ಲಾಸಿಕಲ್ ಮಾದರಿಯಲ್ಲಿ ಡಚ್‌ನ ಅನೀಶ್ ಗಿರಿ ವಿರುದ್ಧ ಸೋತರು. ಗುಕೇಶ್, ಪ್ರಜ್ಞಾನಂದ ಮತ್ತು ಫ್ರಾನ್ಸ್‌ನ ಅಲಿರೇಝಾ ಫಿರೋಜ್ ಕ್ಲಾಸಿಕಲ್ ವಿಭಾಗದಲ್ಲಿ ಮೊದಲ ಬಾರಿಗೆ ತಲಾ ಐದು ಅಂಕ ಸಂಪಾದಿಸಿದರು.  

ಅಲಿರೇಝಾ ಕ್ಲಾಸಿಕಲ್‌ ವಿಭಾಗದಲ್ಲಿ ಅಂತಿಮ ಸುತ್ತನ್ನು ಗೆದ್ದಿದ್ದರೆ ಟೈಬ್ರೇಕರ್‌ ಅಗತ್ಯವಿರಲಿಲ್ಲ. ಏಕೆಂದರೆ ಅವರು ಅಂಕಗಳಲ್ಲಿ ಕರುವಾನಾ ಅವರನ್ನು ಹಿಂದಿಕ್ಕುತ್ತಿದ್ದರು. ಆದರೆ ಕರುವಾನಾ ಸೋಲು ಅನುಭವಿಸಿದರು. ಗುಕೇಶ್ ಮತ್ತು ಪ್ರಜ್ಞಾನಂದ ಡ್ರಾ ಸಾಧಿಸಿದರು. ಆಗ ವಿಜೇತರನ್ನು ನಿರ್ಧರಿಸಲು ನಾಲ್ಕು ಮಾರ್ಗಗಳ ಟೈಬ್ರೇಕರ್ ನಡೆಸಲಾಯಿತು.

ADVERTISEMENT

ಟ್ರೈಬ್ರೇಕರ್‌ ಮಾಸ್ಟರ್ ಅಲ್ಲದ ಕರುವಾನಾ ಅವರು ಗುಕೇಶ್‌, ಪ್ರಜ್ಞಾನಂದ, ಅಲಿರೇಝಾ ಅವರನ್ನು ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. 

ಟೈಬ್ರೇಕರ್‌ನಲ್ಲಿ ಭಾರತದ ಇಬ್ಬರ ಆಟಗಾರರು ಹಿನ್ನಡೆ ಅನುಭವಿಸಿದರು. ಗುಕೇಶ್ ಇನ್ನೂ ಉತ್ತಮವಾಗಿ ಮಾಡಬಹುದಿತ್ತು. 

ಫಲಿತಾಂಶದ ವಿವರ

  • ಅನೀಶ್ ಗಿರಿ (ನೆದರ್ಲೆಂಡ್ಸ್‌, 4.5) ವಿರುದ್ಧ ಫ್ಯಾಬಿಯಾನೊ ಕರುವಾನಾ (5)ಗೆ ಸೋಲು

  • ಅಲಿರೇಝಾ ಫಿರೋಜ್ (ಫ್ರಾನ್ಸ್‌ 5)– ಆರ್. ಪ್ರಜ್ಞಾನಂದ (ಭಾರತ 5) ಪಂದ್ಯ ಡ್ರಾ

  • ಡೇನಿಯಲ್ ಬೊಗ್ಡಾನ್ (ರೋಮೇನಿಯಾ, 3.5)–  ವೇಷಿಯರ್‌ ಲಗ್ರಾವ್‌ (ಫ್ರಾನ್ಸ್ 4.5) ಪಂದ್ಯ ಡ್ರಾ

  • ವೆಸ್ಲಿ ಸೊ (ಅಮೆರಿಕ  4) – ಡಿ. ಗುಕೇಶ್ (ಭಾರತ, 5) ಪಂದ್ಯ ಡ್ರಾ

  • ಇಯಾನ್ ನಿಪೊಮ್‌ ನಿಷಿ (ಫಿಡೆ 4.5)–ನಾಡಿರ್ಬೆಕ್‌ ಅಬ್ದುಸತ್ತಾರೊವ್ (ಉಜ್ಬೇಕಿಸ್ತಾನ, 4.5) ಪಂದ್ಯ ಡ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.