ADVERTISEMENT

ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿ: ಅರೋನಿಯನ್ ಜೊತೆ ಅರ್ಜುನ್ ಡ್ರಾ

ಪಿಟಿಐ
Published 6 ನವೆಂಬರ್ 2024, 23:30 IST
Last Updated 6 ನವೆಂಬರ್ 2024, 23:30 IST
ಚೆಸ್ (ಸಾಂದರ್ಭಿಕ ಚಿತ್ರ)
ಚೆಸ್ (ಸಾಂದರ್ಭಿಕ ಚಿತ್ರ)   

ಚೆನ್ನೈ: ಭಾರತದ ಅರ್ಜುನ್ ಇರಿಗೇಶಿ, ಚೆನ್ನೈ ಗ್ರ್ಯಾಂಡ್‌ಮಾಸ್ಟರ್ಸ್ ಟೂರ್ನಿಯ ಎರಡನೇ ಸುತ್ತಿನಲ್ಲಿ ಬುಧವಾರ ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಲೆವೊನ್ ಅರೋನಿಯನ್ ಜೊತೆ ಡ್ರಾ ಮಾಡಿಕೊಳ್ಳುವ ಮೂಲಕ ಉತ್ತಮ ಆರಂಭ ಮುಂದುವರಿಸಿದರು.

ಅವರು ಮೊದಲ ಸುತ್ತಿನಲ್ಲಿ ಸ್ವದೇಶದ ವಿದಿತ್ ಗುಜರಾತಿ ಅವರನ್ನು ಸೋಲಿಸಿದ್ದರು. ಭಾರತದ ಇನ್ನೊಬ್ಬ ಜಿಎಂ ಅರವಿಂದ ಚಿದಂಬರಮ್ ಇನ್ನೊಂದು ಪಂದ್ಯದಲ್ಲಿ ಮ್ಯಾಕ್ಸಿಂ ವೇಷಿಯರ್ ಲಗ್ರಾವ್ ಜೊತೆ ಡ್ರಾ ಮಾಡಿಕೊಂಡರು.

ಇರಾನ್‌ನ ಅಮಿನ್ ತಬಾತಬೇಯಿ, ಸರ್ಬಿಯಾದ ಅಲೆಕ್ಸಿ ಸರನಾ ಮೇಲೆ ಗೆಲುವು ಪಡೆದರು. ಪರ್ಹಾಮ್ ಮಘಸೂಡ್ಲೂ, ವಿದಿತ್‌ ಅವರನ್ನು ಮಣಿಸಿದರು. ಇರಾನ್‌ನ ಪರ್ಹಾಮ್‌ಗೆ ಇದು ಮೊದಲ ಜಯ. ಮೊದಲ ಸುತ್ತಿನಲ್ಲಿ ಲಗ್ರಾವ್ ಎದುರು ಸೋತಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.