ADVERTISEMENT

ಮಕ್ಕಳಿಗೆ ಚೆಸ್ ಪಾಠ ಹೇಳಿಕೊಟ್ಟ ನಿಹಾಲ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:15 IST
Last Updated 4 ಅಕ್ಟೋಬರ್ 2019, 20:15 IST
ಮಕ್ಕಳೊಂದಿಗೆ ಆಡುತ್ತಿರುವ ನಿಹಾಲ್‌ ಸರಿನ್‌.
ಮಕ್ಕಳೊಂದಿಗೆ ಆಡುತ್ತಿರುವ ನಿಹಾಲ್‌ ಸರಿನ್‌.   

ಬೆಂಗಳೂರು: ಪ್ರತಿಭಾನ್ವಿತ ಚೆಸ್‌ ಆಟಗಾರ ನಿಹಾಲ್‌ ಸರಿನ್‌ ದೇಶದ ಮೂರನೇ ಅತಿ ಕಿರಿಯ ಗ್ರ್ಯಾಂಡ್‌ ಮಾಸ್ಟರ್‌. ಕೇರಳದ 15 ವರ್ಷದ ಈ ಬಾಲಪ್ರತಿಭೆ, ಕೋಣನಕುಂಟೆಯ ಸಿಲಿಕಾನ್‌ ಅಕಾಡೆಮಿ ಶಿಕ್ಷಣ ಅಕಾ ಡೆಮಿ ಆವರಣದಲ್ಲಿ ನಡೆಯುತ್ತಿರು ವಅಕ್ಷಯಕಲ್ಪ ಕರ್ನಾಟಕ ರಾಜ್ಯ ಓಪನ್ ಚೆಸ್ ಚಾಂಪಿಯನ್‌ಷಿಪ್‌ನ ಆಕರ್ಷಣೆಯ ಕೇಂದ್ರವಾಗಿದ್ದ.

ಐದು ದಿನಗಳ ಈ ಚಾಂಪಿಯನ್‌ ಷಿಪ್‌ ಬುಧವಾರ ಆರಂಭವಾಗಿದೆ. ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ನಿಹಾಲ್‌, ಸ್ಪರ್ಧಿಗಳು ಮತ್ತು ಪೋಷಕರ ಜೊತೆ ಸಂವಾದ ನಡೆಸಿದ. ಆಸಕ್ತ ಆಟ ಗಾರರಿಗೆ ಚೆಸ್‌ನ ಕೆಲವು ನಡೆಗಳ ಬಗ್ಗೆ ಪಾಠ ಹೇಳಿಕೊಟ್ಟ.

ಈ ಸಂದರ್ಭದಲ್ಲಿಮಾತನಾಡಿದ ನಿಹಾಲ್‌, ‘ಕಳೆದ ವರ್ಷ ವಿಶ್ವನಾಥ್ ಆನಂದ್ ಜೊತೆ ಆಟವಾಡಿದ್ದೆ. ಆ ಪಂದ್ಯ ಡ್ರಾ ಆಗಿತ್ತು. ಇದು ನನ್ನನ್ನು ಬಲ ಗೊಳಿಸಿದೆ. ನಾನು ಸ್ವಲ್ಪ ನರ್ವಸ್ ಆಗಿದ್ದೆ. ಆದರೆ ಈಗ ಇನ್ನಷ್ಟು ವಿಶ್ವಾಸ ಮೂಡಿದೆ. ಅಕ್ಟೋಬರ್ 10ರಿಂದ ನಡೆಯಲಿರುವ ಫಿಡೆ ಗ್ರ್ಯಾನ್‌ ಚೆಸ್‌ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದೇನೆ’ ಎಂದು ಹೇಳಿದ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.