ADVERTISEMENT

ಅಂಧರ ಚೆಸ್‌: ಅಗ್ರಸ್ಥಾನದಲ್ಲಿ ಜೂಲಿಯಾ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 0:28 IST
Last Updated 5 ಅಕ್ಟೋಬರ್ 2024, 0:28 IST
ಚೆಸ್‌
ಚೆಸ್‌   

ಬೆಂಗಳೂರು: ಎರಡನೇ ಶ್ರೇಯಾಂಕದ ಸಾಲೊಮನ್ ಜೂಲಿಯಾ (ಪೋಲೆಂಡ್‌), ಐಬಿಸಿಎ 12ನೇ ವಿಶ್ವ ಜೂನಿಯರ್ ಅಂಧರ ಚೆಸ್‌ ಚಾಂಪಿಯನ್‌ಷಿಪ್‌ನ ಏಳನೇ ಸುತ್ತಿನ ನಂತರ ಆರು ಪಾಯಿಂಟ್‌ಗಳೊಡನೆ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ.

ನಗರದ ಚಾನ್ಸರಿ ಪೆವಿಲಿಯನ್‌ನಲ್ಲಿ ನಡೆಯುತ್ತಿರುವ ಈ ಕೂಟದಲ್ಲಿ ಶುಕ್ರವಾರ, ಜೂಲಿಯಾ 26 ನಡೆಗಳಲ್ಲಿ ಭಾರತದ ಅಶ್ವಿನ್ ರಾಜೇಶ್ ವಿರುದ್ಧ ಜಯಗಳಿಸಿದರು.

ಅಗ್ರ ಶ್ರೇಯಾಂಕದ ಪೋಲೆಂಡ್‌ನ ರೇಸಿಸ್ ಮೈಕೆಲ್ (5.5), ಭಾರತದ ತನಿಶ್ ವಾಘ್ಮಾರೆ ವಿರುದ್ಧ ಗೆಲುವು ದಾಖಲಿಸಿ ಎರಡನೇ ಸ್ಥಾನದಲ್ಲಿ ಉಳಿದುಕೊಂಡರು.

ADVERTISEMENT

ಭಾರತದ ರಾಹುಲ್‌ ಸಾಹ್ನಿ ಮೇಲೆ ಜಯಗಳಿಸಿದ ಕಜಕಸ್ತಾನದ ಕುವಾನ್ಶುಲಿ ನುರ್ಗಿಸ (5) ಮೂರನೇ ಸ್ಥಾನದಲ್ಲಿದ್ದಾರೆ.

12 ಮಂದಿ ಕಣದಲ್ಲಿದ್ದು, ಜೂಲಿಯಾ ಏಕಮಾತ್ರ ಮಹಿಳಾ ಸ್ಪರ್ಧಿ ಎನಿಸಿದ್ದಾರೆ.

ವಿಶ್ವ ಮಹಿಳೆಯರ ವಿಭಾಗದಲ್ಲಿ ಝಿಲ್ಟ್‌ಝೋವಾ ಲಿಸೆಂಕೊ ಲುಬೋವ್ (ಉಕ್ರೇನ್‌) ಅವರ ಗೆಲುವಿನ ಸರಣಿ ಮುಂದುವರಿದಿದೆ. ಸ್ವದೇಶದ ಬೊಂದರ್‌ ಒಲೆನಾ ಅವರನ್ನು ಸೋಲಿಸಿ ಸತತ ಏಳನೇ ಗೆಲುವನ್ನು ಪಡೆದ ಅವರು ಸಂಭವನೀಯ 7 ಪಾಯಿಂಟ್ಸ್ ಕಲೆಹಾಕಿದ್ದಾರೆ.

ಇಗೆಮನ್ ಎಮಿಲಿಯಾ (ಪೋಲೆಂಡ್‌) ಎರಡನೇ ಸ್ಥಾನದಲ್ಲೇ ಮುಂದುವರಿದಿದ್ದಾರೆ. ಟ್ರಿಯಾನ್‌ಸ್ಕಾ ಎಮಿಲಿಯಾ (ಪೋಲೆಂಡ್‌), ಭಾರತದ ಮೇಘಾ ಚಕ್ರವರ್ತಿ ವಿರುದ್ಧ ಜಯಗಳಿಸಿದ್ದು, ಐದು ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿದ್ದಾರೆ. 20 ಮಂದಿ ಈ ವಿಭಾಗದಲ್ಲಿ ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.