ADVERTISEMENT

ಚೆಸ್‌: ಮುನ್ನಡೆಯಲ್ಲಿ ಅರವಿಂದ್

ಪಿಟಿಐ
Published 20 ಮೇ 2024, 21:01 IST
Last Updated 20 ಮೇ 2024, 21:01 IST
ಚೆಸ್‌ (ಸಾಂದರ್ಭಿಕ ಚಿತ್ರ)
ಚೆಸ್‌ (ಸಾಂದರ್ಭಿಕ ಚಿತ್ರ)   

ಶಾರ್ಜಾ: ಅಮೆರಿಕದ ಸ್ಯಾಮ್‌ ಶಂಕ್ಲಾಡ್‌ ಜೊತೆ ಆರನೇ ಸುತ್ತಿನ ಪಂದ್ಯವನ್ನು ಸುಲಭವಾಗಿ ‘ಡ್ರಾ’ ಮಾಡಿಕೊಂಡ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರವಿಂದ್‌ ಚಿದಂಬರಂ, ಶಾರ್ಜಾ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಸೋಮವಾರ ಅಗ್ರಸ್ಥಾನ ಕಾಪಾಡಿಕೊಂಡರು.

ಅವರು ಆರು ಸುತ್ತುಗಳಿಂದ ಐದು ಪಾಯಿಂಟ್ಸ್‌ ಸಂಗ್ರಹಿಸಿದ್ದಾರೆ. ಅವರಿಗೆ ಉನ್ನತ ಚೆಸ್‌ ಆಟಗಾರರ ಕನಸಾದ 2,700ರ ರೇಟೆಡ್‌ ಕ್ಲಬ್‌ ಸೇರಲು ಕೇವಲ ಎರಡು ಪಾಯಿಂಟ್‌ ಅಷ್ಟೇ ಅಗತ್ಯವಿದೆ. ಈ ಟೂರ್ನಿಯಲ್ಲಿ ಇನ್ನು ಮೂರು ಸುತ್ತುಗಳು ಉಳಿದಿವೆ.

ಅರ್ಜುನ್‌ ಇರಿಗೇಶಿ ಕಪ್ಪು ಕಾಯಿಗಳಲ್ಲಿ ಆಡಿ, ರಷ್ಯಾದ ಡೇನಿಲ್ ಯುಫಾ ಅವರನ್ನು 42 ನಡೆಗಳಲ್ಲಿ ಸೋಲಿಸಿದರು. 6 ಮಂದಿ ಆಟಗಾರರು– ಬರ್ದಿಯಾ ಡೆನ್ಶವರ್‌, ಅಮಿನ್‌ ತಬಾತ ಬೇಯಿ (ಇರಾನ್‌), ಹ್ಯಾನ್ಸ್ ನೀಮನ್‌, ಶಂಕ್ಲಾಡ್‌ (ಇಬ್ಬರೂ ಅಮೆರಿಕ) ಮತ್ತು ಅರ್ಜುನ್‌ ತಲಾ 4.5 ಪಾಯಿಂಟ್ಸ್ ಕಲೆಹಾಕಿ 2ನೇ ಸ್ಥಾನದಲ್ಲಿದ್ದಾರೆ.

ADVERTISEMENT

ಅಭಿಮನ್ಯ ಪುರಾಣಿಕ್ ಜೊತೆ ಡ್ರಾ ಮಾಡಿಕೊಂಡ ಇಂಗ್ಲೆಂಡ್‌ನ ಶ್ರೇಯಸ್‌ ರಾಯಲ್ ಅವರು ಎರಡನೇ ಜಿಎಂ ನಾರ್ಮ್ ಪಡೆಯುವತ್ತ ನಿಕಟವಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.