ಗ್ರೇಟರ್ ನೋಯ್ಡಾ: ಭಾರತದ ಜ್ಞಾನೇಶ್ವರಿ ಯಾದವ್ ಅವರು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಮಹಿಳೆಯರ 49 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದರು.
ಛತ್ತೀಸ್‌ಗಢದ 20 ವರ್ಷದ ಈ ಆಟಗಾರ್ತಿ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ ಸಾಧನೆ ಮಾಡಿದರು. ಅವರು 176 ಕೆಜಿ (78 ಕೆಜಿ+98 ಕೆಜಿ) ಎತ್ತುವ ಮೂಲಕ ಮೀರಾಬಾಯಿ ಚಾನು ಅನುಪಸ್ಥಿತಿಯಲ್ಲಿ ಚಿನ್ನದ ಸಾಧನೆ ಮಾಡಿದರು.
ಭಾರತದ ಜಿಲ್ಲಿ ದಲಾಬೆಹೆರಾ 169 ಕೆಜಿ (75 ಕೆಜಿ + 94 ಕೆಜಿ) ಎತ್ತಿ ಬೆಳ್ಳಿ ಪದಕ ಗೆದ್ದರು. ಅವರು ಕಳೆದ ಆವೃತ್ತಿಯಲ್ಲೂ ಬೆಳ್ಳಿ ಗೆದ್ದಿದ್ದರು.
‘ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವುದು ಮಾತ್ರವಲ್ಲದೆ, ದೇಶಕ್ಕಾಗಿ ಚಿನ್ನ ಗೆಲ್ಲಲು ಸಂತೋಷವಾಗುತ್ತಿದೆ’ ಎಂದು ಜ್ಞಾನೇಶ್ವರಿ ಪ್ರತಿಕ್ರಿಯಿಸಿದ್ದಾರೆ.
ಪುರುಷರ 55 ಕೆಜಿ ವಿಭಾಗದಲ್ಲಿ ಭಾರತದ ಮುಕುಂದ್ ಅಹೆರ್ 239 ಕೆಜಿ (106 ಕೆಜಿ+ 133 ಕೆಜಿ) ಭಾರ ಎತ್ತಿ ಚಿನ್ನ ಗೆದ್ದರು. ಬಾಂಗ್ಲಾದೇಶದ ಎಂ.ಡಿ ಆಶಿಕುರ್ ರೆಹಮಾನ್ ತಾಜ್ 207 ಕೆಜಿ (92 ಕೆಜಿ+ 115 ಕೆಜಿ) ಮೂಲಕ ಬೆಳ್ಳಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.