ಮೆಲ್ಬರ್ನ್: ಯೋಜನಾ ವೆಚ್ಚದಲ್ಲಿ ಭಾರಿ ಹೆಚ್ಚಳ ಕಂಡುಬಂದ ಹಿನ್ನೆಲೆಯಲ್ಲಿ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಅತಿಥ್ಯ ವಹಿಸಲು ಆಸ್ಟ್ರೇಲಿಯಾದ ವಿಕ್ಟೋರಿಯಾ ಪ್ರಾಂತ್ಯ ನಿರಾಕರಿಸಿದೆ.
ಇದರಿಂದಾಗಿ ಬಹುನಿರೀಕ್ಷಿತ 2026ರ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯಲಿದೆಯೇ ಎಂಬುದು ಅನುಮಾನ ಮೂಡಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ವಿಕ್ಟೋರಿಯಾ ಪ್ರಾಂತ್ಯದ ಪ್ರೀಮಿಯರ್ ಡ್ಯಾನ್ ಆಂಡ್ರ್ಯೂಸ್, ನಾಲ್ಕು ಪ್ರಾದೇಶಿಕ ಕೇಂದ್ರಗಳಲ್ಲಿ ನಡೆಯಬೇಕಾಗಿದ್ದ ಕ್ರೀಡಾಕೂಟದ ವೆಚ್ಚವು ಯೋಜನೆಯಂತೆ ಮುಂದೆ ಹೋದರೆ 2.6 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ನಿಂದ 7 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಿಂತಲೂ (4.8 ಬಿಲಿಯನ್ ಡಾಲರ್) ಹೆಚ್ಚು ತಗಲಬಹುದು ಎಂದು ಹೇಳಿದ್ದಾರೆ.
ನಿಜ ಹೇಳಬೇಕೆಂದರೆ 12 ದಿನಗಳ ಕ್ರೀಡಾಕೂಟಕ್ಕಾಗಿ 6ರಿಂದ 7 ಬಿಲಿಯನ್ ಆಸ್ಟ್ರೇಲಿಯನ್ ಡಾಲರ್ ವೆಚ್ಚ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳೆದ ವರ್ಷ ಅಂದಾಜು ಮಾಡಲಾದ ಬಜೆಟ್‌ಗಿಂತಲೂ ಮೂರು ಪಟ್ಟು ಹೆಚ್ಚು ವೆಚ್ಚ ತಗಲುವ ಕ್ರೀಡಾಕೂಟದ ಆಯೋಜನೆಗಾಗಿ ಆಸ್ಪತ್ರೆ ಹಾಗೂ ಶಾಲೆಗಳಿಂದ ಹಣವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಾಗಿ ಕಾಮನ್‌ವೆಲ್ತ್ ಗೇಮ್ಸ್ ಫೆಡರೇಷನ್‌ಗೆ (ಸಿಜಿಎಫ್) ತಿಳಿಸಲಾಗಿದೆ ಎಂದು ಆಂಡ್ರ್ಯೂಸ್ ತಿಳಿಸಿದ್ದಾರೆ. ಆದರೆ ಸಿಜಿಎಫ್ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾದಿಂದ ಇನ್ನಷ್ಟೇ ಸ್ಪಷನೆ ಹೊರಬರಬೇಕಿದೆ.
ಯಾವುದೇ ರಾಷ್ಟ್ರ ಕ್ರೀಡಾಕೂಟದ ಆಯೋಜನೆಗೆ ಮುಂದಾಗದ ಕಾರಣ 2026ರ ಕಾಮನ್‌ವೆಲ್ತ್ ಆಯೋಜನೆಗೆ ಆಸ್ಟ್ರೇಲಿಯಾದ ವಿಕ್ಟೋರಿಯಾ ಬಿಡ್ ಸಲ್ಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.