ಬರ್ಮಿಂಗ್‌ಹ್ಯಾಮ್‌ನಲ್ಲಿ ಮುಕ್ತಾಯವಾದ 22ನೇ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಯ ಚರ್ಚೆ ಈಗ ಜೋರಾಗಿ ನಡೆಯುತ್ತಿದೆ. ಯಾವ ವರ್ಷದ ಸಾಧನೆ ಹೆಚ್ಚು, ಯಾವುದು ಕಡಿಮೆ ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿದೆ.
ಕಳೆದ ನಾಲ್ಕು ವರ್ಷಗಳ ಒಟ್ಟು ಪದಕ ಸಾಧನೆಯನ್ನು ಅವಲೋಕಿಸಿದರೆ ಈ ಬಾರಿಯದ್ದು ಕಡಿಮೆ ಪದಕಗಳು ಎಂಬಂತೆ ಕಾಣುತ್ತದೆ. ಆದರೆ, 2010ರಿಂದ 2018ರವರೆಗೂ ಕೂಟದಲ್ಲಿ ಶೂಟಿಂಗ್ ವಿಭಾಗ ಇತ್ತು.
ಈ ವಿಭಾಗದಲ್ಲಿ ಭಾರತದವರು ಹೆಚ್ಚು ಪದಕಗಳನ್ನು ಜಯಿಸಿದ್ದರು. ಆದರೆ ಈ ಬಾರಿ ಶೂಟಿಂಗ್ ಇರಲಿಲ್ಲ. ಆದರೂ 61 ಪದಕಗಳನ್ನು ಭಾರತ ಗೆದ್ದಿದೆ. ಗೋಲ್ಡ್‌ಕೋಸ್ಟ್‌ಗಿಂತ ಐದು ಪದಕಗಳಷ್ಟೇ ಕಡಿಮೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.