ADVERTISEMENT

ಗೆಲುವಿನ ವಿಶ್ವಾಸದಲ್ಲಿ ಭಾರತ ತಂಡ

ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್‌: ಫಿಜಿ ಎದುರಾಳಿ

ಪಿಟಿಐ
Published 17 ಜೂನ್ 2019, 20:00 IST
Last Updated 17 ಜೂನ್ 2019, 20:00 IST
ಭಾರತ ಮಹಿಳಾ ಹಾಕಿ ತಂಡ–ಪಿಟಿಐ ಚಿತ್ರ
ಭಾರತ ಮಹಿಳಾ ಹಾಕಿ ತಂಡ–ಪಿಟಿಐ ಚಿತ್ರ   

ಹೀರೋಶಿಮಾ: ಎಫ್‌ಐಎಚ್‌ ಮಹಿಳಾ ಹಾಕಿ ಸಿರೀಸ್‌ ಫೈನಲ್ಸ್‌ ಟೂರ್ನಿಯಲ್ಲಿ ಮಂಗಳವಾರ ಭಾರತ ತಂಡ ಫಿಜಿ ತಂಡವನ್ನು ಎದುರಿಸಲಿದೆ. ಭಾರತಕ್ಕಿಂತ ಕೆಳ ರ‍್ಯಾಂಕಿನ ಫಿಜಿಯನ್ನು ಕಟ್ಟಿ ಹಾಕುವುದು ರಾಣಿ ರಾಂಪಾಲ್‌ ಪಡೆಗೆ ಕಷ್ಟವಾಗಲಿಕ್ಕಿಲ್ಲ. ಆದರೆ ಅವಕಾಶಗಳನ್ನು ಗೋಲುಗಳಾಗಿ ಪರಿವರ್ತಿಸುವ ಗುಣವನ್ನು ವೃದ್ಧಿಸಿಕೊಂಡರೆ ಭಾರತಕ್ಕೆ ಗೆಲುವು ಇನ್ನಷ್ಟು ಸರಳವಾಗುವುದು ಎಂದು ತಂಡದ ಕೋಚ್‌ ಜೊಯರ್ಡ್ ಮರಿಜ್ನೆ ಅಭಿಪ್ರಾಯಪಟ್ಟರು.

ವಿಶ್ವ ರ‍್ಯಾಂಕಿಂಗ್‌ನಲ್ಲಿ 9ನೇ ಭಾರತ ಸ್ಥಾನದಲ್ಲಿದ್ದು, ಫಿಜಿಯ ಸ್ಥಾನ 44. ಗುಂಪು ‘ಎ’ನಲ್ಲಿ ತನ್ನ ಕೊನೆಯ ಪಂದ್ಯವಾಡಲಿರುವ ಭಾರತ ಇಲ್ಲಿ ಗೆದ್ದರೆ ಸೆಮಿಫೈನಲ್‌ ಸ್ಥಾನ ಖಚಿತಪಡಿಸಿಕೊಳ್ಳಲಿದೆ.

‘ಈ ಹಿಂದಿನ ಎರಡು ಪಂದ್ಯಗಳಲ್ಲಿ ನಮ್ಮ ತಂಡ ಉತ್ತಮ ಆಟವಾಡಿದೆ. ಆದರೆ ಸಾಧ್ಯವಾದಷ್ಟು ಶ್ರೇಷ್ಠ ಆಟವಾಡುವುದು ನಮ್ಮ ಬಯಕೆಯಾಗಿದೆ. ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗೋಲಾಗಿ ಪರಿವರ್ತಿಸಿಕೊಳ್ಳುವ ಗುಣವನ್ನು ವೃದ್ಧಿಸಿಕೊಳ್ಳಬೇಕಿದೆ. ಪಂದ್ಯ ಗೆಲ್ಲಲು ಇದು ಸಹಕಾರಿ. ಮೊದಲ ಎರಡು ಪಂದ್ಯಗಳಲ್ಲಿ ಅವಕಾಶಗಳನ್ನು ಹೆಚ್ಚು ಸೃಷ್ಟಿಸಿಕೊಂಡು ಪೆನಾಲ್ಟಿ ಕಾರ್ನರ್‌ಗಳನ್ನು ಗಳಿಸಿಕೊಂಡಿದ್ದರಿಂದ ನಮಗೆ ಗೆಲುವು ಒಲಿಯಿತು’ ಎಂದು ಆಟದ ತಂತ್ರವನ್ನು ಮರಿಜ್ನೆ ಬಿಚ್ಚಿಟ್ಟರು.

ADVERTISEMENT

ಎಲ್ಲ ಪಂದ್ಯಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ಮರಿಜ್ನೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.