ADVERTISEMENT

ಕ್ರಾಸ್‌ ಕಂಟ್ರಿ ಓಟ: ನವೀನ್‌, ಅರ್ಚನಾಗೆ ಪ್ರಶಸ್ತಿ

ಕ್ರಾಸ್‌ ಕಂಟ್ರಿ ಓಟ: ಶಿವಾಜಿ, ಪ್ರಿಯಾಂಕಾ ಮಿಂಚು

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2022, 22:00 IST
Last Updated 24 ಡಿಸೆಂಬರ್ 2022, 22:00 IST
   

ಬೆಂಗಳೂರು: ಮೈಸೂರಿನ ನವೀನ್‌ ಪಾಟೀಲ್ ಮತ್ತು ಕೆ.ಎಂ.ಅರ್ಚನಾ ಅವರು ತುಮಕೂರಿನ ಕೊರಟಗೆರೆಯಲ್ಲಿ ಶನಿವಾರ ನಡೆದ ರಾಜ್ಯ ಕ್ರಾಸ್‌ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದರು.

ಕರ್ನಾಟಕ ರಾಜ್ಯ ಅಥ್ಲೆಟಿಕ್‌ ಸಂಸ್ಥೆ ಮತ್ತು ತುಮಕೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯ ಪುರುಷರ ವಿಭಾಗದ 10 ಕಿ.ಮೀ ಓಟವನ್ನು ನವೀನ್‌ ಅವರು 36 ನಿಮಿಷ 02 ಸೆಕೆಂಡುಗಳಲ್ಲಿ ಕ್ರಮಿಸಿದರು.

ನವೀನ್‌ಗೆ ಪ್ರಬಲ ಪೈಪೋಟಿ ನೀಡಿದ ಬೆಂಗಳೂರು ನಗರ ಜಿಲ್ಲೆಯ ಎ.ಆರ್‌.ರೋಹಿತ್‌ (36 ನಿ. 36ಸೆ.) ಮತ್ತು ಡಿವೈಇಎಸ್‌ನ ವೈಭವ್ (36 ನಿ. 51ಸೆ.) ಅವರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡರು.

ADVERTISEMENT

ಡಿವೈಇಎಸ್‌ನ ಶಿವಾಜಿ ಪರಶುರಾಮ್‌ ಮತ್ತು ಬೆಂಗಳೂರು ನಗರ ಜಿಲ್ಲೆಯ ಪ್ರಿಯಾಂಕಾ ಅವರು ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ 20 ವರ್ಷ ವಯಸ್ಸಿನೊಳಗಿನವರ ವಿಭಾಗಗಳಲ್ಲಿ ಚಾಂಪಿಯನ್‌ ಆದರು.

ಉತ್ತಮ ಪ್ರದರ್ಶನ ನೀಡಿದ ಶಿವಾಜಿ ಪರಶುರಾಮ್ ಅವರು 8 ಕಿ.ಮೀ. ದೂರವನ್ನು 23 ನಿ. 14 ಸೆಕೆಂಡುಗಳಲ್ಲಿ ಕ್ರಮಿಸಿದರು.

ಫಲಿತಾಂಶ: ಪುರುಷರ ವಿಭಾಗ (ದೂರ: 10 ಕಿ.ಮೀ): ನವೀನ್‌ಪಾಟೀಲ್‌ (ಮೈಸೂರು; ಕಾಲ: 36 ನಿ. 02 ಸೆ.)–1, ಎ.ಆರ್‌.ರೋಹಿತ್‌ (ಬೆಂಗಳೂರು ನಗರ)–2, ವೈಭವ್‌ (ಡಿವೈಇಎಸ್‌)–3

ಮಹಿಳೆಯರ ವಿಭಾಗ (10 ಕಿ.ಮೀ): ಕೆ.ಎಂ.ಅರ್ಚನಾ (ಮೈಸೂರು; ಕಾಲ: 42 ನಿ. 55.66 ಸೆ.)–1, ತೇಜಸ್ವಿನಿ (ಕೆಎಸ್‌ಪಿ)–2, ಕೆ.ಎಂ.ಮಾನ್ಯಾ (ಹಾಸನ)–3

ಬಾಲಕರ ವಿಭಾಗ: 20 ವರ್ಷದೊಳಗಿನವರು (8 ಕಿ.ಮೀ): ಶಿವಾಜಿ ಪರಶುರಾಮ್‌ (ಡಿವೈಇಎಸ್‌: ಕಾಲ: 23 ನಿ. 14 ಸೆ.)–1, ವಿಜಯ್‌ ಸಾವರ್ತ್‌ಕರ್‌ (ಬೆಳಗಾವಿ)–2, ಸಚಿನ್‌ ದೇವಪ್ಪನವರ್‌ (ಡಿವೈಇಎಸ್‌)–3

18 ವರ್ಷದೊಳಗಿನವರು (6 ಕಿ.ಮೀ): ವಿನೋದ್‌ ಕುಮಾರ್‌ (ಡಿವೈಇಎಸ್‌; ಕಾಲ: 17 ಮಿ. 12 ಸೆ.)–1, ವೇದಾ ಎಸ್‌.ವರನ್ (ಮೈಸೂರು)–2, ಬಿ.ಜೆ.ಅಂಶಿತಾ (ಡಿವೈಇಎಸ್‌)–3

16 ವರ್ಷದೊಳಗಿನವರು (2 ಕಿ.ಮೀ): ದರ್ಶನ್‌ (ತುಮಕೂರು; ಕಾಲ: 6 ನಿ. 10.20 ಸೆ.)–1, ಎಚ್‌.ಪ್ರಥಮ್‌ (ಡಿವೈಇಎಸ್‌)–2, ಸಯೆಸ್‌ ಸಬೀರ್‌ (ಡಿವೈಇಎಸ್‌)–3

ಬಾಲಕಿಯರ ವಿಭಾಗ: 20 ವರ್ಷದೊಳಗಿನವರು (6 ಕಿ.ಮೀ): ಪ್ರಿಯಾಂಕಾ (ಬೆಂಗಳೂರು ನಗರ; ಕಾಲ: 20 ನಿ.)–1, ಎಚ್‌.ಎಂ.ಹರ್ಷಿತಾ (ಡಿವೈಇಎಸ್‌)–2, ಶುಭಾಂಗಿ ಕಾಕತ್ಕರ್‌ (ಬೆಳಗಾವಿ)–3

18 ವರ್ಷದೊಳಗಿನವರು (4 ಕಿ.ಮೀ): ಪ್ರಣತಿ (ಡಿವೈಇಎಸ್‌; ಕಾಲ: 14 ನಿ. 20.52 ಸೆ.)–1, ಪ್ರಿಯಾಂಕಾ (ಡಿವೈಇಎಸ್‌)–2, ಶ್ರೀ ರಕ್ಷಾ (ಕೊಡಗು)–3

16 ವರ್ಷದೊಳಗಿನವರು (2 ಕಿ.ಮೀ): ಎಂ.ಎಂ.ಸ್ನೇಹಾ (ಕೊಡಗು; ಕಾಲ: 6 ನಿ. 25.52 ಸೆ.)–1, ಶಿಲ್ಪಾ ಹೊಸಮನಿ (ಡಿವೈಇಎಸ್‌)–2, ಸಂಜನಾ ಬಸವರಾಜ್‌ (ಡಿವೈಇಎಸ್‌)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.