ADVERTISEMENT

ಬಿಲಿಯರ್ಡ್ಸ್: ಪಂಕಜ್‌ ಅಡ್ವಾಣಿಗೆ ಸಿಂಗಪುರ ಓಪನ್‌ ಕಿರೀಟ

ಪಿಟಿಐ
Published 6 ಅಕ್ಟೋಬರ್ 2024, 15:40 IST
Last Updated 6 ಅಕ್ಟೋಬರ್ 2024, 15:40 IST
<div class="paragraphs"><p>ಪಂಕಜ್‌ ಅಡ್ವಾಣಿ</p></div>

ಪಂಕಜ್‌ ಅಡ್ವಾಣಿ

   

ನವದೆಹಲಿ: ಭಾರತದ ಬಿಲಿಯರ್ಡ್ಸ್ ತಾರೆ ಪಂಕಜ್ ಅಡ್ವಾಣಿ ಭಾನುವಾರ ನಡೆದ ಸೋಂಘೆ ಸಿಂಗಪುರ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಸಿಂಗಪುರದ ಲಗೂನ್ ಬಿಲಿಯರ್ಡ್ಸ್ ರೂಮ್‌ನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಪಂಕಜ್ 5-1 ಅಂತರದಿಂದ ಸ್ಥಳೀಯ ನೆಚ್ಚಿನ ಆಟಗಾರ ಜೇಡನ್ ಒಂಗ್ ಅವರನ್ನು ಸೋಲಿಸಿದರು.

ADVERTISEMENT

ಅಡ್ವಾಣಿ ಕ್ವಾರ್ಟರ್‌ ಫೈನಲ್‌ ರೋಚಕ ಹಣಾಹಣಿಯಲ್ಲಿ 4–3 ಅಂತರದಿಂದ ಐಬಿಎಸ್ಎಫ್‌ ವಿಶ್ವ ಸ್ನೂಕರ್ ಮಾಜಿ ಚಾಂಪಿಯನ್, ಥಾಯ್ಲೆಂಡ್‌ನ ಡೆಚಾವತ್ ಪೂಮ್‌ಜೆಂಗ್ ಅವರಿಗೆ ಆಘಾತ ನೀಡಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.