ಬೆಂಗಳೂರು: ಅನರ್ಘ್ಯಾ ಮಂಜುನಾಥ್ ಅವರು ಇಲ್ಲಿನ ಕೆನರಾ ಯೂನಿಯನ್ನ ಆಶ್ರಯದಲ್ಲಿ ನಡೆಯುತ್ತಿರುವ ಸಿವಿಎಲ್ ಶಾಸ್ತ್ರಿ ಸ್ಮಾರಕ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಸಿಂಗಲ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡರು.
ಟೂರ್ನಿಯ ಮೊದಲ ದಿನವಾದ ಶುಕ್ರವಾರ ಮಹಿಳೆಯರ ವಿಭಾಗದ ಫೈನಲ್ನಲ್ಲಿ ಅನರ್ಘ್ಯಾ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ 4–2 (3-11, 9-11, 11-6, 11-8, 11-7, 11-9)ರಿಂದ ತೃಪ್ತಿ ಪುರೋಹಿತ್ ಅವರನ್ನು ಮಣಿಸಿದರು.
ಸೆಮಿಫೈನಲ್ನಲ್ಲಿ ಅನರ್ಘ್ಯಾ 4–0 (11-5, 11-8, 11-5, 11-7)ಯಿಂದ ಪ್ರೇಕ್ಷಾ ತಿಲಾವತ್ ವಿರುದ್ಧ; ತೃಪ್ತಿ 4–0 (11-6, 11-6, 14-12, 11-9)ಯಿಂದ ಸಹನಾ ಎಚ್. ಮೂರ್ತಿ ಅವರ ವಿರುದ್ಧ ಗೆಲುವು ಸಾಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.