ಬೆಂಗಳೂರು: ಸಿದ್ಧಾಂತ್ ಧರಿವಾಲ್ ಅವರು ಇಲ್ಲಿನ ಕೆನರಾ ಯೂನಿಯನ್ನ ಆಶ್ರಯದಲ್ಲಿ ನಡೆಯುತ್ತಿರುವ ಸಿವಿಎಲ್ ಶಾಸ್ತ್ರಿ ಸ್ಮಾರಕ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ‘ಡಬಲ್’ ಪ್ರಶಸ್ತಿಯನ್ನು ಗೆದ್ದುಕೊಂಡರು.
ಟೂರ್ನಿಯ ಮೂರನೇ ದಿನವಾದ ಭಾನುವಾರ ಸಿದ್ಧಾಂತ್, 17 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ನ ಫೈನಲ್ ಹಣಾಹಣಿಯಲ್ಲಿ 11-3, 11-9, 12-10ರಿಂದ ಅರ್ಣವ್ ಎನ್. ಅವರನ್ನು ಮಣಿಸಿದರು.
ಸೆಮಿಫೈನಲ್ನಲ್ಲಿ ಸಿದ್ಧಾಂತ್ 11-6, 5-11, 11-5, 11-8ರಿಂದ ವಿಭಾಸ್ ವಿ.ಜಿ. ಅವರ ವಿರುದ್ಧ; ಅರ್ಣವ್ 11-7, 12-10, 11-4ರಿಂದ ಅಥರ್ವ ನವರಂಗ ವಿರುದ್ಧ ಗೆಲುವು ಸಾಧಿಸಿದ್ದರು.
15 ವರ್ಷದೊಳಗಿನವರ ವಿಭಾಗದ ಫೈನಲ್ನಲ್ಲಿ ಸಿದ್ಧಾಂತ್ 6-11, 9-11, 11-5, 11-8, 11-9ರಿಂದ ಅಥರ್ವ ಅವರನ್ನು ಸೋಲಿಸಿದರು.
ಸೆಮಿಫೈನಲ್ನಲ್ಲಿ ಸಿದ್ಧಾಂತ್ 11-9, 11-8, 12-14, 11-7ರಿಂದ ಅರ್ಣವ್ ವಿರುದ್ಧ; ಅಥರ್ವ 11-5, 11-6, 11-8ರಿಂದ ಗೌರವ್ ಗೌಡ ವಿರುದ್ಧ ಜಯ ಸಾಧಿಸಿದ್ದರು.
15 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಹಿಯಾ ಸಿಂಗ್ ಗೆದ್ದರು. ಅವರು ಫೈನಲ್ನಲ್ಲಿ 11-5, 5-11, 12-10, 8-11, 11-6ರಿಂದ ತನಿಷ್ಕಾ ಕಪಿಲ್ ಕಾಲಭೈರವ ಅವರನ್ನು ಸೋಲಿಸಿದರು.
ಸೆಮಿಫೈನಲ್ನಲ್ಲಿ ಹಿಯಾ 11-5, 7-11, 9-11, 11-7, 11-5ರಿಂದ ಸಾಕ್ಷ್ಯಾ ಸಂತೋಷ್ ಅವರನ್ನು; ತನಿಷ್ಕಾ 11-9, 11-5, 9-11, 11-7ರಿಂದ ದೀಕ್ಷಿತಾ ಪಿ. ನಾಯ್ಕ್ ಅವರನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.