ಬೆಂಗಳೂರು: ಎಂ. ಕಲೈವನನ್ ಅವರು ಇಲ್ಲಿನ ಕೆನರಾ ಯೂನಿಯನ್ನ ಆಶ್ರಯದಲ್ಲಿ ನಡೆಯುತ್ತಿರುವ ಸಿವಿಎಲ್ ಶಾಸ್ತ್ರಿ ಸ್ಮಾರಕ ಕರ್ನಾಟಕ ರಾಜ್ಯ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪುರುಷರ ಸಿಂಗಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಶನಿವಾರ ನಡೆದ ಫೈನಲ್ನಲ್ಲಿ ಕಲೈವನನ್ 4–1 (8-11, 11-9, 11-7, 13-11, 11-5) ರಿಂದ ರೋಹಿತ್ ಶಂಕರ್ ಅವರನ್ನು ಮಣಿಸಿದರು.
19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಯನ್ನು ಹಿಮಾಂಶಿ ಚೌಧರಿ ಗೆದ್ದರು. ಅವರು ಫೈನಲ್ನಲ್ಲಿ 4–2 (1-11, 11-9, 11-7, 11-3, 10-12, 12-10)ರಿಂದ ನೀತಿ ಅಗರವಾಲ್ ಅವರನ್ನು ಮಣಿಸಿದರು.
19 ವರ್ಷದೊಳಗಿನವರ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಅಭಿನವ್ ಮೂರ್ತಿ 4–2 (10-12, 11-5, 11-13, 11-6, 11-5, 11-8)ರಿಂದ ವಿಭಾಸ್ ವಿ.ಜಿ. ಅವರನ್ನು ಸೋಲಿ ಪ್ರಶಸ್ತಿ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.