ಬರ್ಮಿಂಗ್‌ಹ್ಯಾಮ್: ಭಾರತದತೂಲಿಕಾಮಾನ್ಅವರು ಮಹಿಳಾ ಜೂಡೊ ಸ್ಪರ್ಧೆಯ 78 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದರು.
ಬುಧವಾರ ರಾತ್ರಿ ನಡೆದ ಫೈನಲ್‌ನಲ್ಲಿತೂಲಿಕಾಅವರು ಸ್ಕಾಟ್ಲೆಂಡ್‌ನ ಸಾರಾ ಅಡ್ಲಿಂಗ್ಟನ್ ಎದುರು 1–10 ರಲ್ಲಿ ಸೋತರು.
ಎದುರಾಳಿಯನ್ನು ಕೆಳಕ್ಕೆ ಬೀಳಿಸಿ ಒಂದು ಪಾಯಿಂಟ್ ಗಿಟ್ಟಿಸಿಕೊಂಡಿದ್ದತೂಲಿಕಾಅವರು ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದರು. ಆದರೆ ಪಂದ್ಯ ಕೊನೆಗೊಳ್ಳಲೇ ಸೆಕೆಂಡುಗಳು ಇರುವಾಗ ಸಾರಾ ಅವರು,ತೂಲಿಕಾಅವರನ್ನು ನೆಲಕ್ಕುರುಳಿಸಿ ‘ಇಪೊ’ ಪಾಯಿಂಟ್ ಗಿಟ್ಟಿಸಿಕೊಂಡು ಜಯ ಸಾಧಿಸಿದರು.
ಕೊನೆಯ ಕೆಲವು ಸೆಕೆಂಡುಗಳಲ್ಲಿ ರಕ್ಷಣಾತ್ಮಕವಾಗಿ ಆಡಿದ್ದರೆ ಚಿನ್ನದ ಪದಕ ಭಾರತದ ಸ್ಪರ್ಧಿಯ ಕೊರಳಿಗೇರುತ್ತಿತ್ತು. ಆದರೆ ಅದೃಷ್ಟ ಅವರ ಪರವಾಗಿರಲಿಲ್ಲ.
ನಾಲ್ಕು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿರುವ 22 ವರ್ಷದತೂಲಿಕಾ, ಇದನ್ನೂ ಮುನ್ನ ನಡೆದ ಸೆಮಿಫೈನಲ್ ಹಣಾಹಣಿಯಲ್ಲಿ ನ್ಯೂಜಿಲೆಂಡ್‌ನ ಸಿಡ್ನಿ ಆ್ಯಂಡ್ರೂಸ್ ಅವರನ್ನು ಮಣಿಸಿದ್ದರು. ಕೇವಲ ಮೂರು ನಿಮಿಷಗಳಲ್ಲಿ ಎದುರಾಳಿಗೆ ಸೋಲಿನ ರುಚಿ ತೋರಿಸಿದ್ದರು.
ಪುರುಷರ 100 ಕೆಜಿ ರಿಪೇಚ್ ಸುತ್ತಿನಲ್ಲಿ ಸ್ಪರ್ಧಿಸಿದ್ದ ದೀಪಕ್ ದೇಸ್ವಾಲ್ ಅವರು ಫಿಜಿಯ ತೆವಿಟಾ ತಕವಾಯಾ ಎದುರು ಸೋಲು ಅನುಭವಿಸಿದರು.
ಜೂಡೊದಲ್ಲಿ ಭಾರತಕ್ಕೆ ದೊರೆತ ಮೂರನೇ ಪದಕ ಇದು. ಎಲ್.ಸುಶೀಲಾ ದೇವಿ ಮತ್ತು ವಿಜಯ್ ಕುಮಾರ್ ಅವರು ಕ್ರಮವಾಗಿ ಮಹಿಳೆಯರ 48 ಕೆ.ಜಿ ಮತ್ತು ಪುರುಷರ 60 ಕೆ.ಜಿ. ವಿಭಾಗದಲ್ಲಿ ಕಂಚು ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.