ADVERTISEMENT

ಸೈಕ್ಲಿಂಗ್‌: ಮಲ್ಲಿಕಾರ್ಜುನಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:15 IST
Last Updated 31 ಜನವರಿ 2019, 20:15 IST
ಮಲ್ಲಿಕಾರ್ಜುನ ಯಾದವಾಡ
ಮಲ್ಲಿಕಾರ್ಜುನ ಯಾದವಾಡ   

ಹುಬ್ಬಳ್ಳಿ:ಕರ್ನಾಟಕದಮಲ್ಲಿಕಾರ್ಜುನ ಯಾದವಾಡ, ರಾಜಸ್ಥಾನದ ಜೈಪುರದಲ್ಲಿ ನಡೆಯುತ್ತಿರುವ71ನೇ ರಾಷ್ಟ್ರೀಯ ಸೀನಿಯರ್‌ ಹಾಗೂ ಜೂನಿಯರ್‌ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ಚಿನ್ನದ ಪದಕ ಜಯಿಸಿದ್ದಾರೆ.

ವಿಜಯಪುರದ ಸರ್ಕಾರಿ ಸೈಕ್ಲಿಂಗ್ ಕ್ರೀಡಾ ನಿಲಯದ ಮಲ್ಲಿಕಾರ್ಜುನ14 ವರ್ಷದ ಒಳಗಿನವರ ಬಾಲಕರ 200 ಮೀಟರ್‌ ಫ್ಲೈಯಿಂಗ್‌ ಸ್ಟ್ರಿಂಟ್‌ನಲ್ಲಿ 12.8 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದರು.

18 ವರ್ಷದ ಒಳಗಿನವರ ಬಾಲಕರ ಮೂರು ಕಿ.ಮೀ. ವೈಯಕ್ತಿಕ ಪರ್ಸೂಟ್‌ನಲ್ಲಿ ಬಾಗಲಕೋಟೆ ಜಿಲ್ಲೆಯತುಳಸಿಗೇರಿಯ ವೆಂಕಪ್ಪ ಕೆಂಗುಲಗುತ್ತಿ ಬೆಳ್ಳಿ ಜಯಿಸಿದರು.16 ವರ್ಷದ ಒಳಗಿನವರ 500 ಮೀ. ಟೈಮ್‌ ಟ್ರಯಲ್ಸ್‌ನಲ್ಲಿ ವಿಜಯಪುರದ ಗಣೇಶ ಕುಡಿಗಾನೂರ 35.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚು ಗೆದ್ದುಕೊಂಡರು.

ADVERTISEMENT

ಮೂರು ಪದಕ ಗೆದ್ದ ಅಂಕಿತಾ:ವಿಜಯಪುರದ ಅಂಕಿತಾ ರಾಠೋಡಒಂದೇ ದಿನ ಮೂರು ಪದಕಗಳನ್ನು ಜಯಿಸಿದರು.

14 ವರ್ಷದ ಒಳಗಿನವರ ಬಾಲಕಿಯರ 200 ಮೀ. ಫ್ಲೈಯಿಂಗ್‌ ಸ್ಟ್ರಿಂಟ್‌ನಲ್ಲಿ ಅಂಕಿತಾ 14.6 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಕಂಚು ಪಡೆದರು. ಎರಡು ಕಿ.ಮೀ. ವೈಯಕ್ತಿಕ ಪರ್ಸೂಟ್‌ನಲ್ಲಿ ಮೂರು ನಿಮಿಷ 10.9 ಸೆಕೆಂಡ್‌ಗಳಲ್ಲಿಗುರಿ ತಲುಪಿ ದಿನದ ಎರಡನೇ ಕಂಚು ಜಯಿಸಿದರು.

16 ವರ್ಷದ ಒಳಗಿನವರ ಬಾಲಕಿಯರ ಎರಡು ಲ್ಯಾಪ್‌ ತಂಡ ಸ್ಪರ್ಧೆಯಸ್ಟ್ರಿಂಟ್‌ನಲ್ಲಿ ಅಂಕಿತಾ ಹಾಗೂ ಬೆಂಗಳೂರಿನ ಕೀರ್ತಿ ರಂಗಸ್ವಾಮಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು.ಕರ್ನಾಟಕದ ಸೈಕ್ಲಿಸ್ಟ್‌ಗಳು ಮೊದಲ ದಿನ ಐದು ಪದಕ ಸಂಪಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.