ADVERTISEMENT

ಕೋಚ್‌ ವಿರುದ್ಧ ಅನುಚಿತ ವರ್ತನೆ‘ ಆರೋಪ

ಪಿಟಿಐ
Published 6 ಜೂನ್ 2022, 19:31 IST
Last Updated 6 ಜೂನ್ 2022, 19:31 IST

ನವದೆಹಲಿ: ವಿದೇಶದಲ್ಲಿ ತರಬೇತಿಗೆ ತೆರಳಿದ್ದ ವೇಳೆ ರಾಷ್ಟ್ರೀಯ ತಂಡದ ಕೋಚ್‌ ಆರ್‌.ಕೆ.ಶರ್ಮ ತಮ್ಮೊಂದಿಗೆ ’ಅನುಚಿತವಾಗಿ ವರ್ತಿಸಿದ್ದಾರೆ‘ ಎಂದು ಸೈಕ್ಲಿಸ್ಟ್‌ ಮಯೂರಿ ಲೂಟೆ, ಸೈಕ್ಲಿಂಗ್‌ ಫೆಡರೇಷನ್‌ ಆಫ್‌ ಇಂಡಿಯಾಗೆ (ಸಿಎಫ್‌ಐ) ದೂರು ನೀಡಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಭಾರತ ಕ್ರೀಡಾ ಪ್ರಾಧಿಕಾರ ಮತ್ತು ಸಿಎಫ್‌ಐ ಸೋಮವಾರ ತನಿಖೆಗೆ ಸಮಿತಿಯನ್ನು ನೇಮಿಸಿದೆ. ’ಸ್ಲೊವೇನಿಯದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದಾಗ ಕೋಚ್‌, ಅಸಭ್ಯವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳಾ ಸೈಕ್ಲಿಸ್ಟ್‌ವೊಬ್ಬರು ದೂರು ನೀಡಿದ್ದಾರೆ. ಸಿಎಫ್‌ಐ ಶಿಫಾರಸಿನಂತೆ ಆ ಕೋಚ್‌ಅನ್ನು ನೇಮಿಸಲಾಗಿತ್ತು‘ ಎಂದು ಸಾಯ್‌ ಹೇಳಿಕೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT