ಲೌಸನ್ನೆ, ಸ್ವಿಟ್ಜರ್ಲೆಂಡ್: ‘ಟೂರ್ ಆಫ್ ಸ್ವಿಟ್ಜರ್ಲೆಂಡ್’ ಸ್ಪರ್ಧೆಯ ವೇಳೆ ಕಮರಿಗೆ ಬಿದ್ದು ಗಾಯಗೊಂಡಿದ್ದ ಸ್ಥಳೀಯ ಸೈಕ್ಲಿಸ್ಟ್ ಗಿನೋ ಮೇಡರ್ (26) ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಅವರು ಪ್ರತಿನಿಧಿಸಿದ್ದ ಬಹರೇನ್– ವಿಕ್ಟೋರಿಯಸ್ ತಂಡ ತಿಳಿಸಿದೆ.
2,000 ಮೀಟರ್‌ಗಳಷ್ಟು ಎತ್ತರದ ಮೂರು ಪರ್ವತಯಾನ ಮುಗಿಸಿದ್ದ ಮೇಡರ್, ಫಿಯೆಶ್ ಮತ್ತು ಲಾ ಪಂಟ್ ನಡುವಿನ ಐದನೇ ಹಂತದಲ್ಲಿ ಇಳಿಜಾರಿನಲ್ಲಿ ಕಂದಕಕ್ಕೆ ಬಿದ್ದಿದ್ದರು. ನೀರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಏರ್‌ಲಿಫ್ಟ್ ಮಾಡಿ ಚುರ್ ಎಂಬಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಶುಕ್ರವಾರ ನಿಧನರಾದರು.
ಪ್ಯಾರಿಸ್ ನೈಸ್ ರೇಸ್‌ನಲ್ಲಿ ಐದನೇ ಸ್ಥಾನವನ್ನು ಗಳಿಸಿದ್ದ ಮೇಡರ್, ಈ ಋತುವಿನಲ್ಲಿ ಉತ್ತಮ ಆರಂಭದ ಸೂಚನೆ ನೀಡಿದ್ದರು.
ಅಮೆರಿಕದ ಸೈಕ್ಲಿಸ್ಟ್ ಮ್ಯಾಗ್ನಸ್ ಶೆಫೀಲ್ಡ್ ಅದೇ ಇಳಿಜಾರಿನಲ್ಲಿ ಬಿದ್ದಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
Highlights - null
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.