ADVERTISEMENT

ದಸರಾ ಸಿ.ಎಂ ಕಪ್‌ ಕುಸ್ತಿ ಟೂರ್ನಿ: ಬೆಂಗಳೂರು ಗ್ರಾಮಾಂತರಕ್ಕೆ ಸಮಗ್ರ ಪ್ರಶಸ್ತಿ

ಮೋಹನ್‌ ಕುಮಾರ್‌ ಸಿ.
Published 6 ಅಕ್ಟೋಬರ್ 2024, 23:30 IST
Last Updated 6 ಅಕ್ಟೋಬರ್ 2024, 23:30 IST
<div class="paragraphs"><p>ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ದಸರಾ ಸಿ.ಎಂ ಕಪ್‌ ಕುಸ್ತಿ ಟೂರ್ನಿ’ ಯಲ್ಲಿ ಬೆಂಗಳೂರಿನ ಪುಷ್ಪಾ ಮತ್ತು ಮೈಸೂರಿನ ನೇಹಾ ಅವರ ಪೈಪೋಟಿಯ ದೃಶ್ಯ </p></div>

ಮೈಸೂರಿನ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ‘ದಸರಾ ಸಿ.ಎಂ ಕಪ್‌ ಕುಸ್ತಿ ಟೂರ್ನಿ’ ಯಲ್ಲಿ ಬೆಂಗಳೂರಿನ ಪುಷ್ಪಾ ಮತ್ತು ಮೈಸೂರಿನ ನೇಹಾ ಅವರ ಪೈಪೋಟಿಯ ದೃಶ್ಯ

   

–ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಬೆಂಗಳೂರು ಗ್ರಾಮಾಂತರ ಹಾಗೂ ಬೆಳಗಾವಿ ವಿಭಾಗದ ಕುಸ್ತಿಪಟುಗಳು, ಇಲ್ಲಿ ನಡೆಯುತ್ತಿರುವ ‘ದಸರಾ ಸಿ.ಎಂ ಕಪ್‌ ಕುಸ್ತಿ ಟೂರ್ನಿ’ಯಲ್ಲಿ ಕ್ರಮವಾಗಿ ಪುರುಷರು ಮತ್ತು ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದರು.

ADVERTISEMENT

ನಗರದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಮುಕ್ತಾಯಗೊಂಡ ಪುರುಷರ ‘ಗ್ರೀಕೊ ರೋಮನ್‌’ ಕುಸ್ತಿಯಲ್ಲಿ ಬೆಂಗಳೂರು ಗ್ರಾಮಾಂತರ ವಿಭಾಗದ ಕುಸ್ತಿಪಟುಗಳು 45 ಅಂಕಗಳೊಂದಿಗೆ ಟ್ರೋಫಿ ತಮ್ಮದಾಗಿಸಿಕೊಂಡರೆ, ಬೆಳಗಾವಿ ರನ್ನರ್‌ ಅಪ್‌ (30 ಅಂಕ) ಆಯಿತು. ಪುರುಷರ ಫ್ರೀಸ್ಟೈಲ್‌ ಕುಸ್ತಿಯಲ್ಲೂ ಬೆಂಗಳೂರು ಗ್ರಾಮಾಂತರ ವಿಭಾಗದ ಕುಸ್ತಿಪಟುಗಳು ಸಮಗ್ರ ಪ್ರಶಸ್ತಿ ಗೆದ್ದರು.

ಮಹಿಳೆಯರ ಫ್ರೀಸ್ಟೈಲ್‌ ಕುಸ್ತಿಯಲ್ಲಿ 60 ಅಂಕ ಪಡೆದ ಬೆಳಗಾವಿ ವಿಭಾಗದ ಕುಸ್ತಿಪಟುಗಳು ಚಾಂಪಿಯನ್‌ ಪ್ರಶಸ್ತಿ ಗೆದ್ದರೆ,  ಬೆಂಗಳೂರು ಗ್ರಾಮಾಂತರ ವಿಭಾಗವು 2ನೇ ಸ್ಥಾನ (30 ಅಂಕ) ಪಡೆಯಿತು.

ಫಲಿತಾಂಶ: ಪುರುಷರ ಗ್ರೀಕೊ ರೋಮನ್: 55 ಕೆ.ಜಿ: ಲೋಹಿತ್‌ ಕುಮಾರ್‌ ಮೆಣಸಗಿ (ಬೆಂಗಳೂರು ಗ್ರಾಮಾಂತರ)–1, ಕೀರ್ತನ್ (ಬೆಂಗಳೂರು ಗ್ರಾಮಾಂತರ)–2, ಬಾಲು ಧಾಮಣೇಕರ್‌ (ಬೆಳಗಾವಿ)–3. 60 ಕೆ.ಜಿ: ಸುಶೀಲ್ ಕುಮಾರ್ (ಬೆಂಗಳೂರು ಗ್ರಾಮಾಂತರ)–1, ಜ್ಞಾನೇಶ್ವರ ವಿಠ್ಠಲ (ಬೆಳಗಾವಿ)–2, ಖಲೀಲ್ ಖಾನ್‌ (ಬೆಂಗಳೂರು ನಗರ)–3. 63 ಕೆ.ಜಿ: ಕೊರವರ ಸಂಜೀವನ್‌ (ಬೆಂಗಳೂರು ಗ್ರಾಮಾಂತರ)–1, ಪರಶುರಾಮಪ್ಪ  (ಬೆಂಗಳೂರ ಗ್ರಾಮಾಂತರ)–2, ಸಿದ್ಧಾಂತ ತಟೋಬ (ಬೆಳಗಾವಿ)–3. 67 ಕೆ.ಜಿ: ಪ್ರಭಾಕರ್ (ಬೆಂಗಳೂರು ಗ್ರಾಮಾಂತರ)–1, ಲಗ್ಮಣ್ಣ (ಬೆಳಗಾವಿ)–2, ಭರತ್‌ (ಬೆಳಗಾವಿ)–3. 72 ಕೆ.ಜಿ: ಧನೇಶ್‌ (ಬೆಂ.ಗ್ರಾ)–1, ಕೆಂಚೂ (ಬೆಂಗಳೂರು ಗ್ರಾಮಾಂತರ)–2, ಶಹೀದ್ ಮೊಹಮ್ಮದ್‌ ಸಾಬ್ (ಬೆಳಗಾವಿ)–3. 77 ಕೆ.ಜಿ: ಮಂಜುನಾಥ್ ಬಸಪ್ಪ (ಬೆಂಗಳೂರು ಗ್ರಾಮಾಂತರ)–1, ಕದೇಶ್‌ (ಬೆಳಗಾವಿ)–2, ಮಹೇಶ್‌ ಕೃಷ್ಣ (ಬೆಳಗಾವಿ)–3. 82 ಕೆ.ಜಿ: ಶಿವಾನಂದ್‌ ಭಂಗಿ (ಬೆಳಗಾವಿ)–1, ಎನ್‌.ಹನುಮಂತ (ಬೆಂಗಳೂರು ಗ್ರಾಮಾಂತರ)–2, ನಾಗಸುಂದರ (ಮೈಸೂರು)–3. 87 ಕೆ.ಜಿ: ಕೃಷ್ಣ ರಮೇಶ್‌ (ಬೆಂಗಳೂರು ಗ್ರಾಮಾಂತರ)–1, ವಿಜಯ ಶಿವಜ್‌ (ಬೆಳಗಾವಿ)–2, ಹನುಮಂತ ಶಿವಪ್ಪ (ಮೈಸೂರು)–3. 97 ಕೆ.ಜಿ: ಮಾರುತಿ ಶಿಂಧೆ (ಬೆಳಗಾವಿ)–1, ರಾಘವೇಂದ್ರಗೌಡ (ಬೆಂಗಳೂರು ಗ್ರಾಮಾಂತರ)–2, ಅಶೋಕ ಹನುಮಂತಪ್ಪ (ಬೆಳಗಾವಿ)–3. 130 ಕೆ.ಜಿ: ಕೆಂಚಪ್ಪ (ಬೆಂಗಳೂರು ಗ್ರಾಮಾಂತರ)–1, ಮಲ್ಲಪ್ಪ ಗೌಡ  ಪಾಟೀಲ (ಬೆಂಗಳೂರು ಗ್ರಾಮಾಂತರ)–2, ಇಯಾನ್ ವಿವಾನ್ (ಬೆಂಗಳೂರು ನಗರ)–3.

ಫ್ರೀಸ್ಟೈಲ್‌: 57 ಕೆ.ಜಿ: ಕೆಂಚಪ್ಪ (ಬೆಂಗಳೂರು ಗ್ರಾಮಾಂತರ)–1, ದೇವೇಂದ್ರ (ಕಲಬುರಗಿ)–2, ಖಾಜಾಮೈನುದ್ದೀನ್ (ಬೆಂಗಳೂರು ಗ್ರಾಮಾಂತರ)–3. 61 ಕೆ.ಜಿ: ರೋಹನ್ ಮೋಟೇಶ ಸಿದ್ದಿ (ಬೆಳಗಾವಿ)–1, ವಿರೂಪಾಕ್ಷ (ಬೆಂಗಳೂರು ಗ್ರಾಮಾಂತರ)–2, ಕೆಂಪಣ್ಣಗೌಡ (ಬೆಂ.ಗ್ರಾ)–3. 65 ಕೆ.ಜಿ: ಅರ್ಜುನ್‌ –1, ರಾಘವೇಂದ್ರ ನಾಯಕ (ಬೆಳಗಾವಿ)–2, ಗುರುರಕ್ಷಣ್‌ (ಮೈಸೂರು), ಉಮೇಶ್‌ (ಬೆಳಗಾವಿ)–3. 70 ಕೆ.ಜಿ: ಜ್ಯೋತಿಬಾ ಜಂಬ್ರೆ (ಬೆಳಗಾವಿ)–1, ಆಕಾಶ್ (ಬೆಂಗಳೂರು ಗ್ರಾಮಾಂತರ)–2, ಸೂರಜ್ (ಮೈಸೂರು), ಮಂಜುನಾಥ್ (ಬೆಳಗಾವಿ)–3. 74 ಕೆ.ಜಿ: ಶರತ್ (ಬೆಂಗಳೂರು ಗ್ರಾಮಾಂತರ)–1, ಯತಿರಾಜ್‌ (ಬೆಂಗಳೂರು ಗ್ರಾಮಾಂತರ)–2, ಆದರ್ಶ (ಬೆಳಗಾವಿ)–3. 79 ಕೆ.ಜಿ: ಆಯಾನ್ ಬಡೇಸಾಬ್ (ಬೆಳಗಾವಿ)–1, ಮಹಂತೇಶ್‌ ಗದ್ದಿ (ಬೆಂಗಳೂರು ಗ್ರಾಮಾಂತರ)–2, ಯೋಗೇಶ್‌ (ಬೆಂಗಳೂರು ಗ್ರಾಮಾಂತರ)–3. 86 ಕೆ.ಜಿ: ತಿಮ್ಮನಗೌಡ (ಬೆಂಗಳೂರು ಗ್ರಾಮಾಂತರ)–1, ದರ್ಶನ್‌ ದಿಲೀಪ್‌ (ಬೆಳಗಾವಿ)–2, ರಾಯಪ್ಪ ಶಂಕರ್ (ಬೆಳಗಾವಿ)–3. 92 ಕೆ.ಜಿ: ಹನುಮಂತ ವಿಠ್ಠಲ (ಬೆಂಗಳೂರು ಗ್ರಾಮಾಂತರ)–1, ಹುಲುಗಪ್ಪ (ಕಲಬುರುಗಿ)–2. ಸುರೇಶ್‌ ಮುರಾರಿ (ಬೆಳಗಾವಿ)–3. 97 ಕೆ.ಜಿ: ಕಿರಣ್ (ಬೆಂಗಳೂರು ಗ್ರಾಮಾಂತರ)–1, ಗಜಾನನ ಶ್ರೀಕಂಠ (ಬೆಳಗಾವಿ)–2, ರುದ್ರಪ್ಪ (ಬೆಳಗಾವಿ)–3. 125 ಕೆ.ಜಿ: ಗಿರೀಶ್‌ (ಬೆಂಗಳೂರು ಗ್ರಾಮಾಂತರ)–1, ಪರಶುರಾಮ್ (ಬೆಳಗಾವಿ)–2, ಶರಣ್‌ ಕುಮಾರ್ (ಕಲಬುರಗಿ)–3.

ಮಹಿಳೆಯರ ಫ್ರೀಸ್ಟೈಲ್‌ ಕುಸ್ತಿ: 50 ಕೆ.ಜಿ: ರಾಧಿಕಾ ರಾಮ್‌ದಾಸ್ (ಬೆಳಗಾವಿ)–1, ಶ್ಯಾಮಲಾ (ಮೈಸೂರು)–2, ಕೆ.ಎಸ್‌.ಇಂಚರಾ (ಬೆಂಗಳೂರು ಗ್ರಾಮಾಂತರ)–3. 53 ಕೆ.ಜಿ: ಗೋಪವ್ವ ಮಂಜುನಾಥ (ಬೆಳಗಾವಿ)–1, ಭಕ್ತಿ ಪಾಟೀಲ (ಬೆಂಗಳೂರು ಗ್ರಾಮಾಂತರ)–2, ಕಾವೇರಿ ಸುರೇಶ್‌ (ಬೆಳಗಾವಿ)–3. 55 ಕೆ.ಜಿ: ಐಶ್ವರ್ಯಾ ಕರಿಗಾರ್‌ (ಬೆಳಗಾವಿ)–1, ಭಾಗ್ಯಶ್ರೀ (ಬೆಂಗಳೂರು ಗ್ರಾಮಾಂತರ)–2, ಕಾವ್ಯಾ ತುಕಾರಾಂ (ಬೆಳಗಾವಿ)–3. 57 ಕೆ.ಜಿ: ಗಾಯತ್ರಿ ರಮೇಶ್ (ಬೆಳಗಾವಿ)–1, ರಾಧಿಕಾ ವಿಶ್ವನಾಥ್ (ಬೆಳಗಾವಿ)–2, ರೀತೂ (ಮೈಸೂರು)–3. 59 ಕೆ.ಜಿ: ಶಾಲೀನಾ ಸಾಹೇರ್ ಸಿದ್ದಿ (ಬೆಳಗಾವಿ)–1, ಸ್ವಾತಿ ರಾಜು ಪಾಟೀಲ (ಬೆಳಗಾವಿ)–2, ಪೂಜಿತಾ ಬಾಯಿ (ಬೆಂಗಳೂರು ಗ್ರಾಮಾಂತರ)–3. 62 ಕೆ.ಜಿ: ಲಕ್ಷ್ಮಿ ಸಂಜಯ ಪಾಟೀಲ (ಬೆಳಗಾವಿ)–1, ಭುವನೇಶ್ವರಿ (ಬೆಳಗಾವಿ)–2, ದೀಪಾ ನಾಯಕ್ (ಮೈಸೂರು)–3. 65 ಕೆ.ಜಿ: ಪ್ರಿನ್ಸಿತಾ ಪಿ. ಸಿದ್ದಿ (ಬೆಳಗಾವಿ)–1, ಪ್ರಂಜಲ್ (ಬೆಳಗಾವಿ)–2, ಮಾನ್ಯಾ (ಮೈಸೂರು)–3. 68 ಕೆ.ಜಿ: ಲೀನಾ ಸಿದ್ದಿ (ಬೆಳಗಾವಿ)–1, ಪೂಜಾ ಸಚಿನ್ (ಬೆಳಗಾವಿ)–2, ನೇಹಾ (ಮೈಸೂರು)–3. 72 ಕೆ.ಜಿ: ಪ್ರತಿಕ್ಷಾ ಭೋವಿ (ಬೆಳಗಾವಿ)–1, ಜಾಹ್ನವಿ ಬಸವರಾಜ್ (ಬೆಳಗಾವಿ)–2, ವೈಶಾಲಿ ಸುಭಾಷ್ (ಮೈಸೂರು)–3. 76 ಕೆ.ಜಿ: ಮನೀಷಾ ಸಿದ್ದಿ (ಬೆಳಗಾವಿ)–1, ಸ್ಫೂರ್ತಿ (ಬೆಂಗಳೂರು ನಗರ)–2, ರಂಜಿತಾ (ಬೆಂಗಳೂರು ಗ್ರಾಮಾಂತರ)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.