ನವದೆಹಲಿ: ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟ ಮಹಿಳಾ ಅಥ್ಲೀಟ್ ಖ್ಯಾತಿಯ ದೀಪಾ ಮಲಿಕ್ ಅವರು ತಮ್ಮ ನಿವೃತ್ತಿ ವಿಷಯವನ್ನು ಸೋಮವಾರ ಬಹಿರಂಗಪಡಿಸಿದ್ದಾರೆ. ಭಾರತ ಪ್ಯಾರಾಲಿಂಪಿಕ್ ಸಮಿತಿಯ (ಪಿಸಿಐ) ಅಧ್ಯಕ್ಷೆಯಾಗುವ ಮುನ್ನವೇತಾನುಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ಹೇಳಿದ್ದಾರೆ.
49 ವರ್ಷದ ದೀಪಾ, 2016ರ ರಿಯೊ ಒಲಿಂಪಿಕ್ಸ್‌ನ ಶಾಟ್‌ಪಟ್ ಎಫ್53 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ದೆಹಲಿ ಹೈಕೋರ್ಟ್‌ನ ನಿರ್ದೇಶನಗಳ ಅನ್ವಯ ನಡೆದ ಚುನಾವಣೆಯಲ್ಲಿ ಅವರು ಪಿಸಿಐನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ ಪಿಸಿಐಗೆ ಕ್ರೀಡಾ ಸಚಿವಾಲಯ ಮಾನ್ಯತೆ ನಿರಾಕರಿಸಿದೆ.
‘ನಾನು ಇವತ್ತು ನಿವೃತ್ತಿ ಘೋಷಿಸುತ್ತಿದ್ದೇನೆ ಎಂದವರು ಯಾರು? ಪಿಸಿಐ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಅಂದರೆ ಹೋದ ವರ್ಷದ ಸೆಪ್ಟೆಂಬರ್‌ನಲ್ಲೇ ಸಕ್ರಿಯ ಕ್ರೀಡೆಗೆ ವಿದಾಯ ಹೇಳಿದ್ದೇನೆ. ಆದರೆ ವಿಷಯ ಬಹಿರಂಗಪಡಿಸಿರಲಿಲ್ಲ’ ಎಂದು ದೀಪಾ ಹೇಳಿದ್ದಾರೆ.
‘ಚುನಾವಣಾ ಪ್ರಕ್ರಿಯೆ ಶುರುವಾಗುವ ಮೊದಲೇ ಪಿಸಿಐಗೆ ನನ್ನ ನಿವೃತ್ತಿ ಪತ್ರ ಸಲ್ಲಿಸಿದ್ದೆ. ಹಾಗಾಗಿಯೇ ಚುನಾವಣೆಗೆ ಸ್ಪರ್ಧಿಸಿ, ಅಧ್ಯಕ್ಷೆ ಆಗಲು ಸಾಧ್ಯವಾಯಿತು’ ಎಂದು ಅವರು ನುಡಿದರು.
ಹೋದ ವರ್ಷ ಅವರು ರಾಜೀವ್ ಗಾಂಧಿ ಖೇಲ್‌ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.