ADVERTISEMENT

ಡೆನ್ಮಾರ್ಕ್ ಓಪನ್: ಭಾರತದ ಸವಾಲು ಅಂತ್ಯ

ಪಿಟಿಐ
Published 16 ಅಕ್ಟೋಬರ್ 2024, 15:42 IST
Last Updated 16 ಅಕ್ಟೋಬರ್ 2024, 15:42 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಡೆನ್ಸ್: ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಡೆನ್ಮಾರ್ಕ್‌ ಓಪನ್‌ನಲ್ಲಿ ಮಹಿಳೆಯರ ಡಬಲ್ಸ್‌ನಲ್ಲಿ ಬುಧವಾರ ಹೋರಾಟದ ನಂತರ ಸೋಲನುಭವಿಸಿದರು. ನಂತರ ಮಿಶ್ರ ಡಬಲ್ಸ್‌ನಲ್ಲಿ ಸುಮೀತ್ ರೆಡ್ಡಿ ಮತ್ತು ಸಿಕ್ಕಿ ರೆಡ್ಡಿ ಅವರೂ ಸೋಲನುಭವಿಸುವ ಮೂಲಕ ಡಬಲ್ಸ್‌ನಲ್ಲಿ ಭಾರತದ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿತು.

ವಿಶ್ವ ಕ್ರಮಾಂಕದಲ್ಲಿ 21ನೇ ಸ್ಥಾನದಲ್ಲಿರುವ ಟ್ರಿಸಾ ಮತ್ತು ಗಾಯತ್ರಿ ಅವರು ಒಂದು ಗಂಟೆ 14 ನಿಮಿಷಗಳ ಪಂದ್ಯದಲ್ಲಿ 21–19, 17–21, 15–21ರಲ್ಲಿ ಐದನೇ ಶ್ರೆಯಾಂಕದ ಪರ್ಲಿ ತಾನ್– ಮುರಳೀಧರನ್ ತಿನಾ (ಮಲೇಷ್ಯಾ) ಜೋಡಿ ಎದುರು ಸೋಲನುಭವಿಸಿದರು. ಇದರೊಂದಿಗೆ ಆರು ಮುಖಾಮುಖಿಯಲ್ಲಿ ಭಾರತದ ಆಟಗಾರ್ತಿಯರು ಐದನೇ ಬಾರಿ ಮಲೇಷ್ಯಾ ಈ ಜೋಡಿಗೆ ಮಣಿದಂತಾಯಿತು.

ಮಿಶ್ರ ಡಬಲ್ಸ್‌ನಲ್ಲಿ ಸುಮೀತ್ ರೆಡ್ಡಿ– ಸಿಕ್ಕಿ ರೆಡ್ಡಿ ತೀವ್ರ ಹೋರಾಟ ಪ್ರದರ್ಶಿಸಿದರೂ, 22–20, 19–21, 22–24ರಲ್ಲಿ ಕೆನಡಾದ ಕೆವಿನ್‌ ಲೀ ಮತ್ತು ಇಲಿಯಾನಾ ಝಾಂಗ್ ಅವರಿಗೆ ಮಣಿದರು. ಈ ಪಂದ್ಯ 62 ನಿಮಿಷ ನಡೆಯಿತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.