ADVERTISEMENT

ಡೆನ್ಮಾರ್ಕ್ ಓಪನ್‌: ಎಂಟರ ಘಟ್ಟದಲ್ಲಿ ಸಿಂಧು ಸೋಲು

ಪಿಟಿಐ
Published 19 ಅಕ್ಟೋಬರ್ 2024, 1:21 IST
Last Updated 19 ಅಕ್ಟೋಬರ್ 2024, 1:21 IST
   

ಒಡೆನ್ಸ್‌ : ಭಾರತದ ಅಗ್ರ ಆಟಗಾರ್ತಿ ಪಿ.ವಿ.ಸಿಂಧು, ಡೆನ್ಮಾರ್ಕ್ ಓಪನ್ ಸೂಪರ್‌ 750 ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ ಕ್ವಾರ್ಟರ್‌ಫೈನಲ್‌ನಲ್ಲಿ ಶುಕ್ರವಾರ ಇಂಡೊನೇಷ್ಯಾದ ಗ್ರೆಗೋರಿಯಾ ತುಂಜುಂಗ್ ಎದುರು ಸೋಲನುಭವಿಸಿದರು. ಆ ಮೂಲಕ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಸುಮಾರು ಒಂದು ಗಂಟೆ ನಡೆದ ಪಂದ್ಯದಲ್ಲಿ 29 ವರ್ಷ ವಯಸ್ಸಿನ ಸಿಂಧು 13–21, 21–16, 9–21ರಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಗ್ರೆಗೋರಿಯಾ ಎದುರು ಸೋಲನುಭವಿಸಿದರು.

ಈ ಟೂರ್ನಿಯಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಗ್ರೆಗೋರಿಯಾ ತುಂಜುಂಗ್‌ ಸೆಮಿಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಆ್ಯನ್‌ ಸೆ ಯಂಗ್ ಎದುರು ಆಡಲಿದ್ದಾರೆ.

ADVERTISEMENT

ವಿಶ್ವ ಎಂಟನೇ ಕ್ರಮಾಂಕದ ಇಂಡೊನೇಷ್ಯಾ ಆಟಗಾರ್ತಿ ಉತ್ತಮ ಲಯದಲ್ಲಿದ್ದು ಮೊದಲ ಗೇಮ್ ಸುಲಭವಾಗಿ ಪಡೆದರು. ಆದರೆ ಸಿಂಧು ಎರಡನೇ ಗೇಮ್‌ನಲ್ಲಿ ಹೋರಾಟ ತೋರಿದರು. ಮೊದಲು 6–1ರಲ್ಲಿ ಮುನ್ನಡೆ ಪಡೆದ ಅವರು ನಂತರ ಅದನ್ನು ಉಳಿಸಿಕೊಂಡು 19–15ರಲ್ಲಿ ಹಾಗೂ ನಂತರ ಗೇಮ್‌ಅನ್ನು 21–16ರಲ್ಲಿ ಪಡೆದರು. ಆದರೆ ನಿರ್ಣಾಯಕ ಮೂರನೇ ಗೇಮ್‌ನಲ್ಲಿ ತಂಜುಂಗ್‌ ಆರಂಭದಿಂದಲೇ ಮೇಲುಗೈ ಸಾಧಿಸಿ ಪಂದ್ಯ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.