ADVERTISEMENT

ಬಾಕ್ಸಿಂಗ್‌: ಪ್ರಶಸ್ತಿ ಉಳಿಸಿಕೊಂಡ ಬಿವೊಲ್‌

ರಾಯಿಟರ್ಸ್
Published 8 ಮೇ 2022, 12:49 IST
Last Updated 8 ಮೇ 2022, 12:49 IST
ಕನೆಲೊ ಅಲ್ವಾರಿಸ್‌ಗೆ ಪಂಚ್ ನೀಡಿದ ದಿಮಿಟ್ರಿ ಬಿವೊಲ್ (ಎಡ) –ಎಎಫ್‌ಪಿ ಚಿತ್ರ
ಕನೆಲೊ ಅಲ್ವಾರಿಸ್‌ಗೆ ಪಂಚ್ ನೀಡಿದ ದಿಮಿಟ್ರಿ ಬಿವೊಲ್ (ಎಡ) –ಎಎಫ್‌ಪಿ ಚಿತ್ರ   

ಲಾಸ್ ವೇಗಾಸ್: ಕನೆಲೊ ಅಲ್ವಾರಿಸ್‌ ಎದುರು ಅಚ್ಚರಿಯ ಜಯ ಸಾಧಿಸಿದ ರಷ್ಯಾದ ದಿಮಿಟ್ರಿ ಬಿವೊಲ್ ಅವರು ವಿಶ್ವ ಬಾಕ್ಸಿಂಗ್ ಸಂಸ್ಥೆಯ ಲೈಟ್ ಹೆವಿವೇಟ್ ವಿಭಾಗದ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಂಡರು.

ಟಿ–ಮೊಬೈಲ್ ಅರೆನಾದಲ್ಲಿ ನಡೆದ ಬೌಟ್‌ನಲ್ಲಿ ದಿಮಿಟ್ರಿ ಏಕಪಕ್ಷೀಯ ಜಯ ಸಾಧಿಸಿದರು. 12 ಸುತ್ತುಗಳ ಅಂತ್ಯದಲ್ಲಿ ಮೂವರು ನಿರ್ಣಾಯಕರು ದಿಮಿಟ್ರಿ ಪರವಾಗಿ 115-113 ಪಾಯಿಂಟ್‌ಗಳನ್ನು ನೀಡಿದರು. ಮೆಕ್ಸಿಕೊದ ಅಲ್ವಾರಿಸ್‌ಗೆ ಇದು ಈ ಋತುವಿನ ಎರಡನೇ ಸೋಲಾಗಿದೆ. ದಿಮಿಟ್ರಿ, ಅಲ್ವಾರಿಸ್ ಎದುರಿನ 20 ಬೌಟ್‌ಗಳ ಪೈಕಿ ಎಲ್ಲವನ್ನೂ ಗೆದ್ದಂತಾಯಿತು.

ಗೆಲ್ಲುವ ನೆಚ್ಚಿನ ಬಾಕ್ಸರ್ ಎನಿಸಿಕೊಂಡಿದ್ದ ಅಲ್ವಾರಿಸ್ ಬೌಟ್‌ನ ಪ್ರತಿ ಹಂತದಲ್ಲೂ ಹಿನ್ನಡೆ ಅನುಭವಿಸಿದರು. 31 ವರ್ಷದ ದಿಮಿಟ್ರಿ ಅವರ ರಕ್ಷಣಾತ್ಮಕ ಆಟದ ಎದುರು ಅವರಿಗೆ ಪಾಯಿಂಟ್‌ಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಅವಕಾಶ ಸಿಕ್ಕಿದಾಗಲೆಲ್ಲ ಬಲಶಾಲಿ ಪಂಚ್‌ಗಳನ್ನು ನೀಡಿದ ದಿಮಿಟ್ರಿ ಗೆಲುವು ತಮ್ಮದಾಗಿಸಿಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.