ADVERTISEMENT

ದಿವ್ಯಾಗೆ ವಿಶ್ವ ಜೂನಿಯರ್ ಚೆಸ್‌ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 16:01 IST
Last Updated 13 ಜೂನ್ 2024, 16:01 IST
<div class="paragraphs"><p>ದಿವ್ಯಾ ದೇಶಮುಖ್ </p></div>

ದಿವ್ಯಾ ದೇಶಮುಖ್

   

ಪಿಟಿಐ ಚಿತ್ರ

ಗಾಂಧಿನಗರ: ಅಗ್ರ ಶ್ರೇಯಾಂಕದ ಆಟಗಾರ್ತಿ ಐಎಂ ದಿವ್ಯಾ ದೇಶಮುಖ್‌, ಗುರುವಾರ ಇಲ್ಲಿ ಮುಕ್ತಾಯಗೊಂಡ ಫಿಡೆ ವಿಶ್ವ ಜೂನಿಯರ್ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಅಂತಿಮ (11ನೇ) ಸುತ್ತಿನಲ್ಲಿ ಮಹಾರಾಷ್ಟ್ರದ ಆಟಗಾರ್ತಿ, ಬಲ್ಗೇರಿಯಾದ ಕ್ರಾತ್ಸೇವಾ ಬೆಲೊಸ್ಲಾವಾ ಅವರನ್ನು ಸೋಲಿಸಿ ಒಟ್ಟು 10 ಪಾಯಿಂಟ್ಸ್ ಸಂಗ್ರಹಿಸಿದರು.

ADVERTISEMENT

ಇಲ್ಲಿನ ರ‍್ಯಾಡಿಸನ್‌ ಗಿಫ್ಟ್‌ಸಿಟಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತದ ಇನ್ನಿಬ್ಬರು ಆಟಗಾರ್ತಿಯರಾದ ಶುಭಿ ಗುಪ್ತಾ (8) ಮತ್ತು ರಕ್ಷಿತಾ ರವಿ (7.5) ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದರು.

ಅರ್ಮೇನಿಯಾದ ಎಂ.ಮರಿಯಂ (9.5) ಎರಡನೇ ಮತ್ತು ಅಜರ್‌ಬೈಜಾನ್‌ ಅಲ್ಲಾವೆರ್ದಿಯೇವಾ ಅಯಾನ್ (8.5) ಮೂರನೇ ಸ್ಥಾನ ಗಳಿಸಿದರು. ಎರಡನೇ ಬೋರ್ಡ್‌ನಲ್ಲಿ ಬಿಳಿ ಕಾಯಿಗಳಲ್ಲಿ ಆಡಿದ ಮರಿಯಂ, ರಕ್ಷಿತಾ ರವಿ ಅವರನ್ನು ಮಣಿಸಿದರು. ನಾಲ್ಕನೇ ಬೋರ್ಡ್‌ನಲ್ಲಿ ಸಾಚಿ ಜೈನ್‌ (7), ಶುಭಿ ಗುಪ್ತಾ ಅವರಿಗೆ ಮಣಿದರು.

ಪುರುಷರ ವಿಭಾಗದಲ್ಲಿ ಕಜಕಸ್ತಾನದ ನೊಗರ್‌ಬೆಕ್‌ ಕಝಿಬೆಕ್ (8.5) ಮೊದಲ ಸ್ಥಾನ ಪಡೆದರು. ಭಾರತದ ಪ್ರಣವ್‌ ಆನಂದ್ (7.5) ಹತ್ತನೇ ಸ್ಥಾನ ಪಡೆದರು. ಅಗ್ರ 10ರಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಆಟಗಾರ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.