ADVERTISEMENT

ಗುರುಪ್ರಸಾದ್‌ಗೆ ‘ಐರನ್ ಮ್ಯಾನ್’ ಗೌರವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2024, 16:18 IST
Last Updated 3 ಅಕ್ಟೋಬರ್ 2024, 16:18 IST
ಡಾ. ಗುರುಪ್ರಸಾದ್
ಡಾ. ಗುರುಪ್ರಸಾದ್   

ಮಂಗಳೂರು: ನಗರದ ಬಿಜೈ ನಿವಾಸಿ, ಕ್ಯಾನ್ಸರ್ ತಜ್ಞ ಡಾ.ಗುರುಪ್ರಸಾದ್ ಭಟ್ ಅವರು ವಿಶ್ವ ಟ್ರಯಥ್ಲಾನ್ ಫೆಡರೇಷನ್ ಇಟಲಿಯಲ್ಲಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆಯೋಜಿಸಿದ್ದ ಟ್ರಯಥ್ಲಾನ್‌ನಲ್ಲಿ ‘ಐರನ್ ಮ್ಯಾನ್’ ಆಗಿ ಹೊರಹೊಮ್ಮಿದ್ದಾರೆ.

ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಪ್ರಾಧ್ಯಾಪಕರಾಗಿರುವ ಗುರುಪ್ರಸಾದ್ ಸಮುದ್ರದಲ್ಲಿ 3.8 ಕಿ.ಮೀ ಈಜು ಸ್ಪರ್ಧೆಯನ್ನು 1 ತಾಸು 25 ನಿಮಿಷದಲ್ಲಿ ಮುಗಿಸಿದ್ದು 108 ಕಿ.ಮೀ ಸೈಕ್ಲಿಂಗ್‌ಗೆ 6 ತಾಸು 55 ನಿಮಿಷ ತೆಗೆದುಕೊಂಡಿದ್ದರು. 5 ತಾಸು 10 ನಿಮಿಷಗಳಲ್ಲಿ 42 ಕಿಮೀ ಓಟದ ಗುರಿ ತಲುಪಿದ್ದರು.

‘ಜಗತ್ತಿನ ಅತ್ಯಂತ ಕಠಿಣ ಟ್ರಯಥ್ಲಾನ್ ಎಂದು ಪರಿಗಣಿಸಲಾಗಿರುವ ಇದರಲ್ಲಿ ಒಟ್ಟು 2,439 ಮಂದಿ ಭಾಗವಹಿಸಿದ್ದು ಭಾರತದ 28 ಸ್ಪರ್ಧಾಳುಗಳ ಪೈಕಿ 25 ಮಂದಿ ಮೂರೂ ಮಾದರಿಯನ್ನು ಪೂರ್ಣಗೊಳಿಸಿ ‘ಐರನ್ ಮ್ಯಾನ್’ ಎನಿಸಿಕೊಂಡಿದ್ದಾರೆ. ಕರ್ನಾಟಕದಿಂದ ನಾನು ಏಕೈಕ ಸ್ಪರ್ಧಿಯಾಗಿದ್ದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.