ADVERTISEMENT

Paris Olympics | ಹೈಜಂಪ್‌: ನ್ಯೂಜಿಲೆಂಡ್‌ನ ಕೆರ್‌ಗೆ ಚಿನ್ನ

ಏಜೆನ್ಸೀಸ್
Published 11 ಆಗಸ್ಟ್ 2024, 16:29 IST
Last Updated 11 ಆಗಸ್ಟ್ 2024, 16:29 IST
<div class="paragraphs"><p>ಪ್ಯಾರಿಸ್‌ ಒಲಿಂಪಿಕ್ಸ್‌ ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನ್ಯೂಜಿಲೆಂಡ್‌ನ ಹಮಿಶ್‌ ಕೆರ್‌ ಸಂಭ್ರಮ</p></div>

ಪ್ಯಾರಿಸ್‌ ಒಲಿಂಪಿಕ್ಸ್‌ ಹೈಜಂಪ್‌ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ನ್ಯೂಜಿಲೆಂಡ್‌ನ ಹಮಿಶ್‌ ಕೆರ್‌ ಸಂಭ್ರಮ

   

-ರಾಯಿಟರ್ಸ್ ಚಿತ್ರ

ಪ್ಯಾರಿಸ್‌: ನ್ಯೂಜಿಲೆಂಡ್‌ನ ಹಮಿಶ್‌ ಕೆರ್‌ ಅವರು ಅಮೆರಿಕದ ಸೆಲ್ಬಿ ಮೆಕ್‌ಇವೆನ್‌ ಅವರ ತೀವ್ರ ಪೈಪೋಟಿಯನ್ನು ಯಶಸ್ವಿಯಾಗಿ ಎದುರಿಸಿ ಪ್ಯಾರಿಸ್‌ ಒಲಿಂಪಿಕ್ಸ್‌ ಹೈಜಂಪ್‌ನಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ADVERTISEMENT

ಕೆರ್‌ ಮತ್ತು ಮೆಕ್‌ಇವೆನ್‌ 2.36 ಮೀ. ಎತ್ತರ ಜಿಗಿಯುವಲ್ಲಿ ಯಶಸ್ವಿಯಾದರು. ಆದರೆ, ಕೌಂಟ್‌ಬ್ಯಾಕ್‌ ಆಧಾರದಲ್ಲಿ ಜಯವನ್ನು ನಿರ್ಧರಿಸಲಾಗಲಿಲ್ಲ.

ನಂತರ ಚಿನ್ನದ ಪದಕಕ್ಕಾಗಿ ಜಂಪ್‌ಅಪ್‌ ಮೊರೆ ಹೋಗಲಾಯಿತು. ಅಲ್ಲಿ 2.34 ಮೀ. ಎತ್ತರವನ್ನು ಯಶಸ್ವಿಯಾಗಿ ಜಿಗಿದ ಹಮಿಶ್‌ ಕೆರ್‌ ಚಿನ್ನ ಪದಕಕ್ಕೆ ಕೊರಳೊಡಿದ್ದರು. ಸೆಲ್ಬಿ ಮೆಕ್‌ಇವೆನ್‌ ಬೆಳ್ಳಿಗೆ ತೃಪ್ತರಾದರು.

ಕತಾರ್‌ನ ಮುತಾಜ್‌ ಇಸ್ಸಾ ಬಾರ್ಶಿಮ್‌ 2.34 ಮೀ. ಎತ್ತರ ಜಿಗಿದು ಕಂಚಿನ ಪದಕ ತಮ್ಮದಾಗಿಸಿಕೊಂಡರು. ಟೋಕಿಯೊದಲ್ಲಿ ಬಾರ್ಶಿಮ್‌ ಜೊತೆಗೆ ಚಿನ್ನದ ಪದಕ ಹಂಚಿಕೊಂಡಿದ್ದ ಇಟಲಿಯ ಜಾನ್‌ ಮಾರ್ಕೊ ತಂಬೆರಿ 2.22 ಮೀ. ಎತ್ತರ ಜಿಗಿಯಲಷ್ಟೆ ಶಕ್ತವಾದರು. ಒಟ್ಟು 12 ಸ್ಪರ್ಧಿಗಳಲ್ಲಿ ಅವರು 11ನೇ ಸ್ಥಾನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.