ಬೆಂಗಳೂರು: ಏಷ್ಯನ್ ಗೇಮ್ಸ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಗೆದ್ದಿರುವ ಅಥ್ಲೀಟ್ ದ್ಯುತಿ ಚಾಂದ್ ಅವರು ತಮ್ಮ ತರಬೇತಿಯ ವೆಚ್ಚ ಭರಿಸಲು ಬಿಎಂಡಬ್ಲ್ಯು ಕಾರು ಮಾರಾಟ ಮಾಡಲು ಮುಂದಾಗಿದ್ದಾರೆ.
ಕೊರೊನಾ ವೈರಸ್ ಪ್ರಸರಣ, ಲಾಕ್‌ಡೌನ್‌ನಿಂದಾಗಿ ಉದ್ಯಮಗಳು ಆರ್ಥಿಕ ಹಿನ್ನಡೆ ಅನುಭವಿಸಿದ್ದು, ಪ್ರಾಯೋಜಕರು ಮುಂದೆ ಬರುತ್ತಿಲ್ಲವೆನ್ನಲಾಗಿದೆ. ಆದ್ದರಿಂದ ಅವರು ತಮ್ಮ ಕಾರನ್ನು ₹ 30 ಲಕ್ಷ ರೂಪಾಯಿಗೆ ಮಾರಲು ಮುಂದಾಗಿದ್ದಾರೆ.
‘ಒಲಿಂಪಿಕ್ಸ್‌ಗೆ ತೆರಳುವ ಸಿದ್ಧತೆ ಮಾಡುತ್ತಿದ್ದೇನೆ. ಪ್ರತಿ ತಿಂಗಳು ನನ್ನ ತರಬೇತಿಗೆ ಐದು ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ವಿದೇಶದಲ್ಲಿ ತರಬೇತಿ ಪಡೆಯಬೇಕು. ಒಡಿಶಾ ಮುಖ್ಯಮಂತ್ರಿ ಮೂರು ಕೋಟಿ ರೂಪಾಯಿ ಬಹುಮಾನ ಕೊಟ್ಟಿದ್ದರು. ಅದರಲ್ಲಿ ಮನೆ ಮತ್ತು ಕಾರು ಖರೀದಿಸಿದ್ದೆ. ಈಗ ನನ್ನ ಬಳಿ ಹಣ ಇಲ್ಲ. ಆದ್ದರಿಂದ ಈ ನಿರ್ಧಾರ ಮಾಡಿದ್ದೇನೆ‘ ಎಂದು ದ್ಯುತಿ ’ಸ್ಪೋರ್ಟ್ಸ್‌ಸ್ಟಾರ್‘ ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
’ಸರ್ಕಾರದಲ್ಲಿಯೂ ದುಡ್ಡು ಇಲ್ಲ ಎಂದು ಅಧಿಕಾರಿಗಳುಹೇಳುತ್ತಿದ್ದಾರೆ‘ ಎಂದೂ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.