ADVERTISEMENT

ಭಾರತದ ಮೂವರು ಬಾಕ್ಸರ್‌ಗಳಿಗೆ ಕೋವಿಡ್‌

ಟರ್ಕಿಗೆ ತೆರಳಿರುವ ತಂಡ: ಐದು ಮಂದಿ ಸಿಬ್ಬಂದಿಯಲ್ಲೂ ಸೋಂಕು

ಪಿಟಿಐ
Published 30 ಮಾರ್ಚ್ 2021, 13:11 IST
Last Updated 30 ಮಾರ್ಚ್ 2021, 13:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಟರ್ಕಿಯ ಬೊಸ್ಪೊರಸ್‌ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತದ ಮೂವರು ಬಾಕ್ಸರ್‌ಗಳು ಸೇರಿ ಎಂಟು ಮಂದಿಗೆ ಕೋವಿಡ್–19 ಖಚಿತಪಟ್ಟಿದೆ. ಅವರೆಲ್ಲರೂ ಸದ್ಯ ಇಸ್ತಾನ್‌ಬುಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಬೆಳ್ಳಿಪದಕ ವಿಜೇತ ಗೌರವ್ ಸೋಳಂಕಿ (57 ಕೆಜಿ ವಿಭಾಗ), ಪ್ರಯಾಗ್ ಚೌಹಾನ್‌ (75 ಕೆಜಿ) ಹಾಗೂ ಬ್ರಿಜೇಶ್ ಯಾದವ್ ಅವರಿಗೆ ಸೋಂಕು ದೃಢಪಟ್ಟಿದೆ. ತರಬೇತುದಾರರಾದ ಧರ್ಮೇಂದ್ರ ಯಾದವ್‌, ಸಂತೋಷ್ ಬಿರ್ಮೋಳೆ, ಫಿಸಿಯೊಥೆರಪಿಸ್ಟ್‌ಗಳಾದ ಶಿಖಾ ಕೇಡಿಯಾ, ಉಮೇಶ್‌ ಮತ್ತು ವಿಡಿಯೊ ಅನಾಲಿಸ್ಟ್ ನಿತಿನ್ ಕುಮಾರ್ ಸೋಂಕಿತರಲ್ಲಿ ಸೇರಿದ್ದು ಪ್ರತ್ಯೇಕವಾಸದಲ್ಲಿದ್ದಾರೆ.

ಬೊಸ್ಪೊರಸ್ ಟೂರ್ನಿ ಈಗಾಗಲೇ ಮುಕ್ತಾಯವಾಗಿದ್ದು, ಪುರುಷರ ವಿಭಾಗದಲ್ಲಿ ಸೋಳಂಕಿ ಒಬ್ಬರೇ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ನಿಖತ್ ಜರೀನ್ (51 ಕೆಜಿ) ಮಹಿಳಾ ವಿಭಾಗದಲ್ಲಿ ಕಂಚು ವಿಜೇತರಾಗಿದ್ದರು.

ADVERTISEMENT

ಲಲಿತ್ ಪ್ರಸಾದ್‌ (52 ಕೆಜಿ), ಶಿವ ಥಾಪಾ (63 ಕೆಜಿ), ದುರ್ಯೋಧನ್‌ ಸಿಂಗ್ ನೇಗಿ (69 ಕೆಜಿ), ನಮನ್ ತನ್ವರ್‌ (91 ಕೆಜಿ) ಹಾಗೂ ಕೃಷ್ಣ ಶರ್ಮಾ (91+ ಕೆಜಿ) ಟೂರ್ನಿಯ ಪುರುಷರ ವಿಭಾಗದಲ್ಲಿ ಸ್ಪರ್ಧಿಸಿದ್ದ ಇನ್ನುಳಿದ ಬಾಕ್ಸರ್‌ಗಳು.

ಸೋನಿಯಾ ಲಾಥರ್‌ (57 ಕೆಜಿ), ಪರ್ವೀನ್‌ (60 ಕೆಜಿ), ಜ್ಯೋತಿ ಗ್ರೇವಾಲ್‌ (69 ಕೆಜಿ) ಹಾಗೂ ಪೂಜಾ ಸೈನಿ (75 ಕೆಜಿ) ಮಹಿಳಾ ಬಾಕ್ಸರ್‌ಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.