ADVERTISEMENT

ಜಾಗತಿಕ ವಿವಿ ಕ್ರೀಡಾಕೂಟಕ್ಕೆ ಆಳ್ವಾಸ್‌ನ 8 ಮಂದಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2023, 13:47 IST
Last Updated 23 ಜೂನ್ 2023, 13:47 IST
ಬಸಂತಿ ಕುಮಾರಿ
ಬಸಂತಿ ಕುಮಾರಿ    

ಮೂಡುಬಿದಿರೆ (ದಕ್ಷಿಣ ಕನ್ನಡ): ಚೀನಾದ ಚೆಂಗ್ಡುವಿನಲ್ಲಿ ಜುಲೈ 28ರಿಂದ ಆಗಸ್ಟ್ 8ರ ವರೆಗೆ ನಡೆಯಲಿರುವ ವಿಶ್ವವಿದ್ಯಾಲಯಗಳ ಜಾಗತಿಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ಎಂಟು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ‘ ಪುರುಷರ 400 ಮೀಟರ್ಸ್ ಓಟ ಮತ್ತು 4x400 ಮೀಟರ್ಸ್‌ ರಿಲೆಯಲ್ಲಿ ತೀರ್ಥೇಶ್ ಶೆಟ್ಟಿ, 20 ಕಿ.ಮೀ ನಡಿಗೆಯಲ್ಲಿ ಹರದೀಪ್, ಡೆಕಾಥ್ಲಾನ್‌ನಲ್ಲಿ ಸ್ಟ್ಯಾಲಿನ್ ಜೋಸ್, ಮಹಿಳೆಯರ 5 ಸಾವಿರ ಮತ್ತು 10 ಸಾವಿರ ಮೀಟರ್ಸ್‌ ಓಟದಲ್ಲಿ ಪೂನಮ್ ದಿಂಕೆ ಸೋನುನೆ, 10 ಸಾವಿರ ಮೀಟರ್ಸ್‌ ಓಟದಲ್ಲಿ ಬಸಂತಿ ಕುಮಾರಿ, ಹಾಫ್ ಮ್ಯಾರಥಾನ್‌ನಲ್ಲಿ ನಿರ್ಮಾ ಠಾಕೂರ್, ಹೈಜಂಪ್‌ನಲ್ಲಿ ಸಿಂಚನಾ ಎಂ.ಎಸ್, ಲಾಂಗ್ ಜಂಪ್ ಮತ್ತು 4x400 ಮೀಟರ್ಸ್ ರಿಲೆಯಲ್ಲಿ ಭವಾನಿ ಯಾದವ್ ಭಾಗವತಿ ಪಾಲ್ಗೊಳ್ಳಲಿದ್ದಾರೆ‘ ಎಂದರು.

’ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸುವ ಈ ಕ್ರೀಡಾಪಟುಗಳು ಭುವನೇಶ್ವರದ ಕಳಿಂಗ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಜಾಗತಿಕ ವಿವಿ ಕ್ರೀಡಾಕೂಟದಲ್ಲಿ ಈವರೆಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಒಟ್ಟು 13 ಕ್ರೀಡಾಪಟುಗಳು ಭಾಗವಹಿಸಿದ್ದರು‘ ಎಂದು ಮೋಹನ ಆಳ್ವ  ತಿಳಿಸಿದರು.

ADVERTISEMENT
ಹರದೀಪ್‌
ನಿರ್ಮಾ ಠಾಕೂರ್
ತೀರ್ಥೇಶ್‌
ಪೂನಂ
ಸಿಂಚನಾ
ಸ್ಟಾಲಿನ್
ಭವಾನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.