ADVERTISEMENT

ಕೊಕ್ಕೊ ವಿಶ್ವಕಪ್‌: 24 ತಂಡಗಳು ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2024, 16:25 IST
Last Updated 25 ಅಕ್ಟೋಬರ್ 2024, 16:25 IST

ನವದೆಹಲಿ: ಇಂಗ್ಲೆಂಡ್‌, ಜರ್ಮನಿ, ಹಾಲೆಂಡ್‌, ಅಮೆರಿಕ ಸೇರಿದಂತೆ ಒಟ್ಟು 24 ರಾಷ್ಟ್ರಗಳ ತಂಡಗಳು 2025ರಲ್ಲಿ ನಡೆಯುವ ಮೊದಲ ಕೊಕ್ಕೊ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಕೊಕ್ಕೊ ರಾಷ್ಟ್ರೀಯ ಫೆಡರೇಷನ್ ಶುಕ್ರವಾರ ತಿಳಿಸಿದೆ.

ನವದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಜನವರಿ 13ರಿಂದ 19ರವರೆಗೆ ಟೂರ್ನಿ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿ ಪಂದ್ಯಗಳು ನಡೆಯಲಿದೆ.

ಏಷ್ಯಾ ಖಂಡದಿಂದ ಆತಿಥೇಯ ಭಾರತ ಸೇರಿದಂತೆ ಬಾಂಗ್ಲಾದೇಶ, ಭೂತಾನ್, ಇಂಡೊನೇಷ್ಯಾ, ಇರಾನ್, ಮಲೇಷ್ಯಾ, ನೇಪಾಳ, ಪಾಕಿಸ್ತಾನ, ದಕ್ಷಿಣ ಕೊರಿಯಾ ಮತ್ತು ಶ್ರೀಲಂಕಾ ತಂಡಗಳು ಭಾಗವಹಿಸಲಿವೆ. ಇದಲ್ಲದೆ, ಇಂಗ್ಲೆಂಡ್, ಜರ್ಮನಿ, ನೆದರ್ಲೆಂಡ್ಸ್‌, ಪೋಲೆಂಡ್, ಕೆನಡಾ, ಅಮೆರಿಕ, ಬ್ರೆಜಿಲ್‌, ಪೆರು, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ತಂಡಗಳೂ ಸ್ಪರ್ಧೆಯಲ್ಲಿ ಇರಲಿವೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.