ADVERTISEMENT

ಐಎಸ್‌ಎಸ್‌ಎಫ್ ವಿಶ್ವಕಪ್‌: ಇಶಾ ಸಿಂಗ್‌ ಆರನೇ ಸ್ಥಾನ

ಪಿಟಿಐ
Published 4 ಜೂನ್ 2024, 23:31 IST
Last Updated 4 ಜೂನ್ 2024, 23:31 IST
ಭಾರತದ ಇಶಾ ಸಿಂಗ್
ಭಾರತದ ಇಶಾ ಸಿಂಗ್   

ಮ್ಯೂನಿಚ್: ಭಾರತದ ಇಶಾ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮಹಿಳೆಯರ 25 ಮೀ ಪಿಸ್ತೂಲ್ ಸ್ಪರ್ಧೆಯಲ್ಲಿ ಆರನೇ ಸ್ಥಾನ ಪಡೆದರು.

ಫೈನಲ್‌ನಲ್ಲಿ ಇಶಾ 20 ಸ್ಕೋರ್‌ ಗಳಿಸಿದರು. ಸ್ಪರ್ಧೆಯಲ್ಲಿ ಫ್ರಾನ್ಸ್‌ನ ಕ್ಯಾಮಿಲ್ಲೆ ಜೆಡ್ರೆಜೆವ್ಸ್ಕಿ ಚಿನ್ನ ಗೆದ್ದರು. ಜರ್ಮನಿಯ ಡೋರಿನ್ ವೆನ್ನೆಕ್ಯಾಂಪ್ ಬೆಳ್ಳಿ ಪದಕ ಗೆದ್ದರೆ, ಕೊರಿಯಾದ ಕಿಮ್ ಯೆಜಿ ಮೂರನೇ ಸ್ಥಾನ ಪಡೆದರು.

ಸೋಮವಾರ ನಡೆದಿದ್ದ ಮಹಿಳೆಯರ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯಲ್ಲಿ ಭಾರತದ ರಮಿತಾ ಅವರೂ ಆರನೇ ಸ್ಥಾನ ಗಳಿಸಿದ್ದರು. ಸತತ ಎರಡನೇ ದಿನವೂ ಭಾರತಕ್ಕೆ ಪದಕ ಒಲಿಯಲಿಲ್ಲ. ಮೂರು ಚಿನ್ನದೊಂದಿಗೆ ಚೀನಾ ಪದಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.