ADVERTISEMENT

ಕ್ರೀಡಾಪಟು ಅದಿತಿಗೆ ಒಲಿಂಪಿಕ್ಸ್ ಪದಕ: ಕಪಿಲ್ ದೇವ್‌ ವಿಶ್ವಾಸ

ಪಿಟಿಐ
Published 11 ಜುಲೈ 2024, 16:21 IST
Last Updated 11 ಜುಲೈ 2024, 16:21 IST
<div class="paragraphs"><p>ಕಪಿಲ್ ದೇವ್</p></div>

ಕಪಿಲ್ ದೇವ್

   

ನವದೆಹಲಿ: ಭಾರತದ ಗಾಲ್ಫ್ ಕ್ರೀಡಾಪಟು ಅದಿತಿ ಅಶೋಕ್ ಅವರು ಈಗ ತಮ್ಮ  ವೃತ್ತಿಜೀವನದ ಎರಡನೇ ಒಲಿಂಪಿಕ್ಸ್‌ನಲ್ಲಿ ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ. 

ಹೋದ ಸಲ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಅವರಿಗೆ ಪದಕ ಕೈತಪ್ಪಿತ್ತು. ನಾಲ್ಕನೇ ಸ್ಥಾನ ಪಡೆದಿದ್ದರು. ಅದರಿಂದಾಗಿ ಈ ಬಾರಿ ಅವರ ಮೇಲೆ ನಿರೀಕ್ಷೆಯ ಭಾರ ಹೆಚ್ಚಿದೆ.

ADVERTISEMENT

ಪ್ರೊಫೆಷನಲ್ ಗಾಲ್ಫ್ ಟೂರ್ ಆಫ್‌ ಇಂಡಿಯಾ (ಪಿಜಿಟಿಐ) ಅಧ್ಯಕ್ಷ, ಕ್ರಿಕೆಟ್ ದಂತಕಥೆ ಕಪಿಲ್ ದೇವ್ ಅವರೂ, ‘ಅದಿತಿಯವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ತೋರಿದ್ದ ದಿಟ್ಟತನದ ಆಟವನ್ನು ಪ್ಯಾರಿಸ್‌ನಲ್ಲಿಯೂ ಮತ್ತೊಮ್ಮೆ ತೋರುವ ವಿಶ್ವಾಸ ನನಗಿದೆ.  ಕ್ರಿಕೆಟರ್ಸ್ ಮತ್ತು ಗಾಲ್ಫರ್‌ಗಳಿಗೆ ಫಾರ್ಮ್ ಬಹಳ ಮುಖ್ಯ. ಅದಿತಿ ಅವರು ತಮ್ಮ ನೈಜ ಲಯದಲ್ಲಿ ಆಡಿದರೆ  ಪದಕ ಜಯ ನಿಶ್ಚಿತ’ ಎಂದಿದ್ದಾರೆ. 

ಏಕದಿನ ಕ್ರಿಕೆಟ್ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್ ಈಚೆಗಷ್ಟೇ ಪಿಜಿಟಿಐ ಅಧ್ಯಕ್ಷರಾಗಿ ನೇಮಕವಾಗಿದ್ದರು. 

‘ಭಾರತದಲ್ಲಿ ಅಂತರರಾಷ್ಟ್ರೀಯ ದರ್ಜೆಯ ಗಾಲ್ಫ್‌ ಕೋರ್ಸ್‌ಗಳು ಅಭಿವೃದ್ಧಿಯಾಗಬೇಕು. ಅದಲ್ಲದೇ ಗಾಲ್ಫ್‌ ಕ್ರೀಡೆಗೆ ಆರ್ಥಿಕ ಸಂಪನ್ಮೂಲ ತರುವುದು ನನ್ನ ಮೊದಲ ಆದ್ಯತೆ. ಹೆಚ್ಚು ಪ್ರಾಯೋಜಕರು ಲಭಿಸಿದಷ್ಟು ದೊಡ್ಡ ದರ್ಜೆಯ ಟೂರ್ನಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಸಾಧ್ಯವಾಗಲಿದೆ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಕಪಿಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.