ಬೆಂಗಳೂರು: ಭಾರತ ತಂಡದ ನಾಯಕಿ ಸವಿತಾ ಪೂನಿಯಾ ಸತತ ಮೂರನೇ ಬಾರಿಗೆ ‘ವರ್ಷದ ಗೋಲ್ ಕೀಪರ್’ ಪ್ರಶಸ್ತಿಯ ಪೈಪೋಟಿಯಲಿದ್ದಾರೆ. ಈ ವರ್ಷದ ‘ಎಫ್‌ಐಎಚ್ ಹಾಕಿ ಸ್ಟಾರ್ ಅವಾರ್ಡ್ಸ್’ನಲ್ಲಿ ಈ ಪ್ರಶಸ್ತಿಗಾಗಿ ಸವಿತಾ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
‘ನಾನು ಸತತ ಎರಡು ವರ್ಷ ಈ ಪ್ರಶಸ್ತಿ ಗೆಲ್ಲುತ್ತೇನೆಂದು ನಿರೀಕ್ಷಿಸಿಯೇ ಇರಲಿಲ್ಲ. ಮತ್ತೆ ನಾಮನಿರ್ದೇಶನ ಮಾಡಲಾಗಿದೆ’ ಎಂದು ಸವಿತಾ ಹೇಳಿದರು. ಅವರು 2021 ಮತ್ತು 2022ರಲ್ಲಿ ‘ವರ್ಷದ ಗೋಲ್‌ಕೀಪರ್’ ಪ್ರಶಸ್ತಿಗೆ ಪಾತ್ರರಾಗಿದ್ದರು.
‘ಇದು ನನಗೆ ಹೆಮ್ಮೆಯ ಕ್ಷಣ. ನನ್ನ ಕುಟುಂಬಕ್ಕೆ ಮತ್ತು ಸಹ ಆಟಗಾರ್ತಿಯರಿಗೂ ಸಹ’ ಎಂದು ಹೇಳಿದರು.
ಸವಿತಾ ನೇತೃತ್ವದ ತಂಡ 2022ರ ಎಫ್‌ಐಎಚ್ ಮಹಿಳಾ ನೇಷನ್ಸ್ ಕಪ್ ಸೇರಿದಂತೆ ಕೆಲವು ಟೂರ್ನಿಗಳಲ್ಲಿ ಯಶಸ್ಸು ಸಾಧಿಸಿದೆ. ನೇಷನ್ಸ್ ಕಪ್ ವಿಜಯದಿಂದ ಭಾರತ 2023–24ನೇ ಸಾಲಿಗೆ ಪ್ರೊ ಲೀಗ್‌ಗೆ ಬಡ್ತಿ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.