ADVERTISEMENT

ಫುಟ್‌ಬಾಲ್‌ ಟೂರ್ನಿ | ಜೊಶುವಾ ಹ್ಯಾಟ್ರಿಕ್‌: ಬಿಎಫ್‌ಸಿಗೆ ಜಯ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 15:25 IST
Last Updated 28 ಅಕ್ಟೋಬರ್ 2024, 15:25 IST
<div class="paragraphs"><p>ಹ್ಯಾಟ್ರಿಕ್‌ ಗೋಲು ಗಳಿಸಿದ ಬಿಎಫ್‌ಸಿ ತಂಡದ ಜೊಶುವಾ ಡಿಸಿಲ್ವ (ಎಡ)  </p></div>

ಹ್ಯಾಟ್ರಿಕ್‌ ಗೋಲು ಗಳಿಸಿದ ಬಿಎಫ್‌ಸಿ ತಂಡದ ಜೊಶುವಾ ಡಿಸಿಲ್ವ (ಎಡ)

   

–ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌

ಬೆಂಗಳೂರು: ಜೊಶುವಾ ಡಿಸಿಲ್ವ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಬಿಎಫ್‌ಸಿ ತಂಡವು ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಸೋಮವಾರ 4–0 ಗೋಲುಗಳಿಂದ ಎಂಎಫ್‌ಎಆರ್‌ ಸ್ಟೂಡೆಂಟ್ಸ್‌ ಯೂನಿಯನ್‌ ಎಫ್‌ಸಿ ತಂಡವನ್ನು ಮಣಿಸಿತು.

ADVERTISEMENT

ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೊಶುವಾ 1ನೇ, 3ನೇ ಮತ್ತು 64ನೇ ನಿಮಿಷದಲ್ಲಿ ಗೋಲು ಗಳಿಸಿದರು. ಮತ್ತೊಂದು ಗೋಲನ್ನು ಸೋಹಂ ವಾರ್ಷ್ಣೇಯ (49ನೇ) ದಾಖಲಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಸ್ಪೋರ್ಟಿಂಗ್‌ ಕ್ಲಬ್‌ ಬೆಂಗಳೂರು ತಂಡವು 1–0ಯಿಂದ ಚಿಕ್ಕಮಗಳೂರು ಎಫ್‌ಸಿ ತಂಡವನ್ನು ಸೋಲಿಸಿತು. ಸ್ಪೋರ್ಟಿಂಗ್‌ ಕ್ಲಬ್‌ ಪರ ವಿ.ವಿಘ್ನೇಶ್‌ (45ನೇ) ಗೆಲುವಿನ ಗೋಲು ದಾಖಲಿಸಿದರು.

ಇಂದಿನ ಪಂದ್ಯಗಳು

ರೂಟ್ಸ್‌ ಎಫ್‌ಸಿ– ಪರಿಕ್ರಮ ಎಫ್‌ಸಿ (ಮಧ್ಯಾಹ್ನ 12.45)

ಸೌತ್‌ ಯುನೈಟೆಡ್‌ ಎಫ್‌ಸಿ– ಬೆಂಗಳೂರು ಇಂಡಿಪೆಂಡೆಂಟ್ಸ್‌ ಎಫ್‌ಸಿ (3.45)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.