ADVERTISEMENT

ನಿವೃತ್ತಿ ಘೋಷಿಸಿದ ಭಾರತ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ 

ಪಿಟಿಐ
Published 24 ಅಕ್ಟೋಬರ್ 2024, 9:59 IST
Last Updated 24 ಅಕ್ಟೋಬರ್ 2024, 9:59 IST
<div class="paragraphs"><p>ರಾಣಿ ರಂಪಾಲ್‌&nbsp;</p></div>

ರಾಣಿ ರಂಪಾಲ್‌ 

   

ಪಿಟಿಐ ಚಿತ್ರ

ನವದೆಹಲಿ: ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ (29) ನಿವೃತ್ತಿ ಘೋಷಿಸಿದ್ದಾರೆ.

ADVERTISEMENT

1994ರಲ್ಲಿ ಹರಿಯಾಣದ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದ ರಾಣಿ ತಮ್ಮ ಆರನೇ ವಯಸ್ಸಿಗೆ ಹಾಕಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಹಲವಾರು ಹೆಣ್ಣುಮಕ್ಕಳಿಗೆ ಸ್ಪೂರ್ತಿಯಾಗಿದ್ದರು. ಭಾರತ ಹಾಕಿ ತಂಡದಲ್ಲಿ 16 ವರ್ಷಗಳ ಕಾಲ ರಾಣಿ ಮಿಂಚಿದ್ದಾರೆ.

ರಾಣಿ 14 ವರ್ಷದವರಿದ್ದಾಗ 2008ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಆಯ್ಕೆಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾಕಿ ಪಂದ್ಯವನ್ನಾಡಿದ್ದರು.

ಭಾರತ ಪರ 254 ಪಂದ್ಯಗಳಲ್ಲಿ ರಾಣಿ 205 ಗೋಲು ಗಳಿಸಿದ್ದಾರೆ.

2021ರ ಟೊಕಿಯೊ ಒಲಿಂಪಿಕ್ಸ್‌ನಲ್ಲಿ ರಾಣಿ ನೇತೃತ್ವದ ಹಾಕಿ ತಂಡ ನಾಲ್ಕನೇ ಸ್ಥಾನ ಪಡೆದುಕೊಂಡಿತ್ತು.

‘ಇದೊಂದು ಅಭೂತಪೂರ್ವ ಪ್ರಯಾಣವಾಗಿದೆ. ಇಷ್ಟು ದೀರ್ಘ ಕಾಲ ಭಾರತಕ್ಕಾಗಿ ಆಡುತ್ತೇನೆ ಎಂದುಕೊಂಡಿರಲಿಲ್ಲ. ಬಾಲ್ಯದಲ್ಲಿ ಸಾಕಷ್ಟು ಬಡತನವಿದ್ದರೂ, ದೇಶವನ್ನು ಪ್ರತಿನಿಧಿಸುವಂತಹ ಸಾಧನೆ ಮಾಡಬೇಕಂಬ ತುಡಿತವಿತ್ತು’ ಎಂದು ರಾಣಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ರಾಣಿ ಅವರು, 2020ರಲ್ಲಿ ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿ ಹಾಗೂ ದೇಶದ ನಾಲ್ಕನೇ ಅತ್ಯುನ್ನತ ಗೌರವವಾದ ಪದ್ಮಶ್ರಿ ಪ್ರಶಸ್ತಿಗೆ ಭಾಜರಾಗಿದ್ದಾರೆ.

ರಾಣಿ ಇತ್ತೀಚೆಗೆ ರಾಷ್ಟ್ರೀಯ ಮಹಿಳಾ ಜೂನಿಯರ್‌ ಹಾಕಿ ತಂಡದ ಕೋಚ್‌ ಆಗಿ ನೇಮಕಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.