ADVERTISEMENT

ಭಾರತದ ಮಾಜಿ ಪೋಲೋ ಆಟಗಾರ ಹರಿಂದರ್ ಸಿಂಗ್ ಸೋಧಿ ನಿಧನ

ಪಿಟಿಐ
Published 10 ನವೆಂಬರ್ 2024, 11:29 IST
Last Updated 10 ನವೆಂಬರ್ 2024, 11:29 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ನವದೆಹಲಿ: ಭಾರತದ ಮಾಜಿ ಪೋಲೋ ಆಟಗಾರ, ಅರ್ಜುನ ಪ್ರಶಸ್ತಿ ಪುರಸ್ಕೃತ ಹರಿಂದರ್ ಸಿಂಗ್ ಸೋಧಿ ಅವರು ನಿಧನರಾಗಿದ್ದಾರೆ.

ADVERTISEMENT

ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರು ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಸೋಧಿ ಅವರು, ಹನುತ್ ಸಿಂಗ್, ಸವಾಯಿ ಮಾನ್ ಸಿಂಗ್ (ಜೈಪುರದ ಮಹಾರಾಜ) ಹಾಗೂ ಅವರ ಮಗ ಭವಾನಿ ಸಿಂಗ್ ಅವರೊಂದಿಗೆ ಪೋಲೋ ಆಡಿದ್ದರು.

ಇವರ ಕಿರಿಯ ಸಹೋದರ, ಹೆಸರಾಂತ ಪೋಲೋ ಆಟಗಾರ ರವೀಂದರ್ ಸಿಂಗ್ ಸೋಧಿ ಕೂಡ ಅರ್ಜುನ ಪ್ರಶಸ್ತಿ ಪುರಸ್ಕೃತರು.

ಹರೀಂದರ್ ಅವರು, 1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಭಾರತದ ಈಕ್ವೆಸ್ಟ್ರಿಯನ್ ತಂಡದ ಮ್ಯಾನೇಜರ್ ಆಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.