ಸಾಖಿರ್, ಬಹರೇನ್: ಯುವ ಚಾಲಕ ಜೆಹಾನ್ ದಾರುವಾಲಾ ಅವರು ಫಾರ್ಮುಲಾ–2ರಲ್ಲಿ ಭಾನುವಾರ ಇತಿಹಾಸ ನಿರ್ಮಿಸಿದರು. ಸಾಖಿರ್ಗ್ರ್ಯಾನ್‌ಪ್ರಿಯಲ್ಲಿ ಗೆಲುವು ಸಾಧಿಸಿದ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಎನಿಸಿಕೊಂಡರು. ಎಫ್–2 ಚಾಂಪಿಯನ್ ಮಿಕ್ ಶುಮಾಕರ್ ಮತ್ತು ಡ್ಯಾನಿಯಲ್ ಟಿಕ್‌ಟುಮ್ ಅವರಿಂದ ತೀವ್ರ ಸ್ಪರ್ಧೆ ಎದುರಿಸಿದ 22 ವರ್ಷದ ಜೆಹಾನ್ ತಾವು ಪ್ರತಿನಿಧಿಸುವ ರಯೋ ರೇಸಿಂಗ್ ಕಂಪನಿಗೆ ಪ್ರಶಸ್ತಿ ತಂದುಕೊಟ್ಟರು.
ಆರಂಭದಲ್ಲಿ ಜೆಹಾನ್ ಅವರನ್ನು ಹಿಂದಿಕ್ಕಿ ಟಿಕ್‌ಟುಮ್ ಮುನ್ನುಗ್ಗಿದರು. ಈ ಸಂದರ್ಭದಲ್ಲಿ ಶುಮಾಕರ್ ಹಿನ್ನಡೆ ಅನುಭವಿಸಿದರು. ನಂತರವೂ ಟಿಕ್‌ಟುಮ್ ಮುನ್ನಡೆ ಉಳಿಸಿಕೊಂಡರು. ಶುಮಾಕರ್ ಎರಡನೇ ಸ್ಥಾನದಲ್ಲಿ ಮುಂದುವರಿದರು. ಈ ಸಂದರ್ಭದಲ್ಲಿ ಜೆಹಾನ್ ಮೂರನೇ ಸ್ಥಾನದಲ್ಲಿ ಉಳಿದರು. ನಂತರ ಕೆಲವು ಭಾಗಗಳಲ್ಲಿ ಜೆಹಾನ್ ಇಬ್ಬರನ್ನೂ ಹಿಂದಿಕ್ಕಿದರು. ಕೆಲವು ಲ್ಯಾಪ್‌ಗಳು ಮುಗಿಯುತ್ತಿದ್ದಂತೆ ಶುಮಾಕರ್ ವೇಗ ಹೆಚ್ಚಿಸಿಕೊಂಡು ಜೆಹಾನ್ ಅವರನ್ನು ಹಿಂದಿಕ್ಕಿದರು. ಆದರೆ ಪಟ್ಟುಬಿಡದ ಜೆಹಾನ್ ಪ್ರಬಲ ಪೈಪೋಟಿ ನೀಡಿದರು. ಹೀಗಾಗಿ ಎರಡನೇ ಸ್ಥಾನದಲ್ಲಿ ಮುಂದೆ ಸಾಗಿದರು. ನಂತರ ಕ್ಷಿಪ್ರವಾಗಿ ಕೆಲವು ಲ್ಯಾಪ್‌ಗಳನ್ನು ಮುಗಿಸಿ ಮೊದಲ ಸ್ಥಾನಕ್ಕೇರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.